ಮಡಿಕೇರಿ: ಜೈಲ್ನಲ್ಲಿರುವ ವಿಚಾರಣಾ ಕೈದಿಗೆ ಟೂತ್ ಪೇಸ್ಟ್ ನಲ್ಲಿ ಅಮಲು ಪದಾರ್ಥ ಸಾಗಾಟ: ಆರೋಪಿಯ ಬಂಧನ
ಮಡಿಕೇರಿ : ಮಡಿಕೇರಿಯಲ್ಲಿನ ಜಿಲ್ಲಾ ಕಾರಗೃಹದಲ್ಲಿರುವ ವಿಚಾರಣಾ ಬಂಧಿಯೊರ್ವನ ಸಂಬಂಧಿ ಎಂದು ಹೇಳಿಕೊಂಡು ಬಂದ ವ್ಯಕ್ತಿಯೊಬ್ಬ ಟೂತ್ ಪೇಸ್ಟ್ ಟ್ಯೂಬ್ಬ ಒಳಗೆ ಪೇನ್ದ್ರ ಬದಲಿಗೆ ಕಪ್ಪು ಬಣ್ಣದ ಅಮಲು ಪದಾರ್ಥವನ್ನು ತುಂಬಿ ತಂದಿದ್ದ ಹಿನ್ನೆಲೆ ಆರೋಪಿಯನ್ನು ಬಂಧಿಸಿ ದಸ್ತಗಿರಿ ಮಾಡಲಾಗಿದೆ.
ಕೇರಳ ರಾಜ್ಯ ಕಣ್ಣೂರು ಜಿಲ್ಲೆ ತಲಚೇರಿ ಮೂಲದ ನಿವಾಸಿ ಸುರಭಿಲ್ (26) ಎಂಬಾತನನ್ನು 24 ಗ್ರಾಂ ಹ್ಯಾಶಿಶ್ ನಿಷೇಧಿತ ಮಾದಕ ವಸ್ತುವಿನೊಂದಿಗೆ ಮಾ.4 ರಂದು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಾ.4 ರಂದು ಕೇರಳದ ಸುರಬೀಲ್ ಮಡಿಕೇರಿಯಲ್ಲಿನ ಜಿಲ್ಲಾ ಕಾರಗೃಹದಲ್ಲಿರುವ ವಿಚಾರಣಾ ಬಂಧಿಯಾದ ಸನಮ್ ಎಂಬಾತನ ಸಹೋದರನೆಂದು ಹೇಳಿಕೊಂಡು ಸಂದರ್ಶನಕ್ಕಾಗಿ ಕಾರಗೃಹಕ್ಕೆ ಬಂದಿದ್ದಾನೆ.
ವಿಚಾರಣಾ ಬಂಧಿ ಸನಮ್ಮೆ ದಿನ ನಿತ್ಯದ ಸಾಮಾಗ್ರಿಗಳಾದ ಟೂತ್ ಪೇಸ್ಟ್, ಟೂತ್ ಬ್ರಶ್, ಸೋಪ್, ಬಟ್ಟೆ ಸೋಪ್, ಆಯಿಲ್ ಮತ್ತು ಶ್ಯಾಂಟ್ಗಳನ್ನು ತಂದಿದ್ದು, ಸದರಿ ಸಾಮಾಗ್ರಿಗಳನ್ನು ವಿಚಾರಣಾ ಬಂಧಿ ಸನಮ್ಮೆ ನೀಡುವ ಮೊದಲು ಜಿಲ್ಲಾ ಕಾರಗೃಹ ಅಧೀಕ್ಷಕ ಪರಿಶೀಲನೆ ನಡೆಸಿದ್ದಾರೆ.




