ವಕ್ಫ್ ತಿದ್ದುಪಡಿ ಕಾನೂನು ವಿರೋಧಿ ಹೋರಾಟದ ತೀಕ್ಷ್ಣತೆಯನ್ನು ಸಹಿಸದ ಸಂಘಪರಿವಾರ ಪ್ರೇರಿತ ಸರ್ಕಾರದಿಂದ ಎಂ ಕೆ ಫೈಝಿ ಬಂಧನ: ರಿಯಾಝ್ ಫರಂಗಿಪೇಟೆ
ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ರಾಷ್ಟ್ರೀಯ ಅಧ್ಯಕ್ಷರಾದ ಎಂ ಕೆ ಫೈಝಿ ಅವರ ಅಕ್ರಮ ಬಂಧನವನ್ನು ಖಂಡಿಸಿ ಬಿ ಸಿ ರೋಡ್ ಕೈಕಂಬ ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.



ಪ್ರತಿಭಟನೆಯನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ ವಕ್ಫ್ ತಿದ್ದುಪಡಿ ಕಾನೂನು ವಿರೋಧಿ ಹೋರಾಟವನ್ನು ಎಸ್ ಡಿ ಪಿ ಐ ರಾಷ್ಟ್ರಾದ್ಯಂತ ಸಂಘಟಿಸುತ್ತಿದ್ದು, ಇದನ್ನು ಸಹಿಸದ ಕೇಂದ್ರ ಸಂಘಪರಿವಾರ ಪ್ರೇರಿತ ಬಿಜೆಪಿ ಸರ್ಕಾರವು ನಮ್ಮ ಅಧ್ಯಕ್ಷರನ್ನು ಅಕ್ರಮ ಬಂಧನ ಮಾಡಿದೆ. ಈ ಕೃತ್ಯವನ್ನು ಎಸ್ ಡಿ ಪಿ ಐ ಸಹಿಸುವುದಿಲ್ಲ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಮಾತನಾಡಿ ನಿರಂಕುಶ, ಕೋಮುವಾದಿ ಸರ್ಕಾರವನ್ನು ಪ್ರಶ್ನಿಸುವ ಎಲ್ಲಾ ಹೋರಾಟಗಾರರನ್ನು ಈ ಸರ್ಕಾರ ಸುಳ್ಳು ಕೇಸುಗಳ ಮೂಲಕ ಬಂಧನದಲ್ಲಿಡುತ್ತಿದೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಬಂಧನದ ಮೂಲಕ ನಮ್ಮ ಹೋರಾಟವನ್ನು ಇಲ್ಲವಾಗಿಸಬಹುದು ಎಂಬುದು ನಿಮ್ಮ ಹಗಲು ಕನಸು, ಈ ಜಗತ್ತಿನಲ್ಲಿ ದೊಡ್ಡ ಹೋರಾಟಗಳು ಆರಂಭಗೊಂಡದ್ದೇ ಜೈಲಿನಿಂದ ಎಂದರು.
ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ರಾಜ್ಯ ಉಪಾಧ್ಯಕ್ಷೆ ಶಾಹಿದಾ ತಸ್ನೀಂ, ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಮೂನಿಷ್ ಆಲಿ, ಕಾರ್ಯದರ್ಶಿ ಅಶ್ರಫ್ ತಲಪಾಡಿ, ಸಮಿತಿ ಸದಸ್ಯರಾದ ಅಡ್ವೊಕೇಟ್ ಕಬೀರ್, ವಿಮ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ, ವಿಮ್ ಜಿಲ್ಲಾಧ್ಯಕ್ಷೆ ನೌರೀನ್ ಆಲಂಪಾಡಿ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಾಹುಲ್ ಎಸ್ ಎಚ್, ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ, ಜೊತೆ ಕಾರ್ಯದರ್ಶಿ ಕಬೀರ್ ಅಕ್ಕರಂಗಡಿ, ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ಇಕ್ಬಾಲ್ ಇಝಾನ್, ಕೋಶಾಧಿಕಾರಿ ಯಾಸಿರ್ ಕಲ್ಲಡ್ಕ, ಕ್ಷೇತ್ರ ಸಮಿತಿ ಸದಸ್ಯರಾದ ಯೂಸುಫ್ ಆಲಡ್ಕ, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರ್, ಕಲ್ಲಡ್ಕ ಬ್ಲಾಕ್ ಸಮಿತಿ ಅಧ್ಯಕ್ಷರಾದ ಸತ್ತಾರ್ ಕಲ್ಲಡ್ಕ ಹಾಗೂ ಪುದು ಬ್ಲಾಕ್ ಅಧ್ಯಕ್ಷರಾದ ಇರ್ಫಾನ್ ತುಂಬೆ ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಲಾಯಿತು. ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಡಕಬೈಲ್ ಹಾಗೂ ಕಾವಳಕಟ್ಟೆಯಲ್ಲಿ ಪ್ರತಿಭಟನೆ ನಡೆಯಿತು.






