ಮದುವೆಯಾದ 6 ತಿಂಗಳಲ್ಲಿ ಟೆಕ್ಕಿ ಆತ್ಮಹತ್ಯೆ: ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ
ಹೈದರಾಬಾದ್: ಮದುವೆಯಾದ 6 ತಿಂಗಳಿಗೆ ಹೈದರಾಬಾದ್‌ನ ಸಾಫ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬರುತ್ತಿದೆ.
ಹೈದರಾಬಾದ್‌ನ ರಾಯದುರ್ಗಂ ನಿವಾಸಿ ದೇವಿಕಾ (35) ನೇಣಿಗೆ ಶರಣಾಗಿರುವ ಟೆಕ್ಕಿ.
ಹೈಟೆಕ್ ಸಿಟಿಯ ಟೆಕ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ದೇವಿಕಾ. ಮಾ. 2ರಂದು ರಾತ್ರಿ ಹೈದರಾಬಾದ್‌ನ ತಮ್ಮ ಮನೆಯಲ್ಲಿ ದೇವಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿ ನೇಣು ಬಿಗಿದುಕೊಂಡಿದ್ದಾಳೆ ಎಂದು ಪತಿ ಸತೀಶ್, ದೇವಿಕಾ ಮನೆಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.





