ರೈಲಿಗೆ ಸಿಲುಕಿ ವ್ಯಕ್ತಿ ಮೃತ್ಯು
ಚಿಂತಾಮಣಿ: ನಗರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘಟಕದ ನಿರ್ವಾಹಕ ಕಂ ಚಾಲಕ ವೆಂಕಟರಮಣ (45) ಬೆಂಗಳೂರಿನ ಕೆ.ಆರ್.ಪುರ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಆಕಸ್ಮಿಕವಾಗಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಅಂಬಾಜಿ ದುರ್ಗ ಹೋಬಳಿ ಕೋಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಸಾಪುರ ನಿವಾಸಿಯಾಗಿದ್ದ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ.
ಶಿವರಾತ್ರಿ ಅಂಗವಾಗಿ ತಮಿಳುನಾಡಿನ ದೇವಾಲಯ ಒಂದಕ್ಕೆ ತೆರಳಲು ರೈಲ್ವೆ ಟಿಕೆಟ್ ಕಾಯ್ದಿರಿಸಿದ್ದರು. ಬುಧವಾರ ಮಧ್ಯಾಹ್ನವೇ ಪ್ರಯಾಣಿಸಲು ನಿಲ್ದಾಣಕ್ಕೆ ತಲುಪಿದ್ದರು. ಮೂತ್ರ ವಿಸರ್ಜನೆಗಾಗಿ ರೈಲ್ವೆ ಹಳಿ ಪಕ್ಕದಲ್ಲಿ ನಡೆದು ಹೋಗುತ್ತಿದ್ದಾಗ ಅದೇ ವೇಳೆ ಬಂದ ಹೈಸ್ಪೀಡ್ ರೈಲಿನ ಗಾಳಿ ವೇಗಕ್ಕೆ ಸಿಲುಕಿದ್ದಾರೆ. ರೈಲು ಸುಮಾರು ದೂರ ಎಳೆದೊಯ್ದು ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.




