March 20, 2026

ಸಾಯಿ ಗೋಲ್ಡ್ ಪ್ಯಾಲೇಸ್‌ನಿಂದ ಚಿನ್ನ ಕಳವು: ಇಬ್ಬರು ಆರೋಪಿಗಳ ಸಹಿತ 63 ಲಕ್ಷ ರೂ. ಮೌಲ್ಯದ ಚಿನ್ನ ವಶ

0
IMG-20250225-WA0409.jpg

ಬೆಂಗಳೂರು: ಜೆಡಿಎಸ್ ಪರಿಷತ್ ಸದಸ್ಯ ಶರವಣ ಮಾಲೀಕತ್ವದ ಸಾಯಿ ಗೋಲ್ಡ್ ಪ್ಯಾಲೇಸ್‌ನಿಂದ ಚಿನ್ನ ಕದ್ದಿದ್ದ ಆರೋಪಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿ 63 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಮೌನೇಶ್, ಮಹಾವೀರ್ ಬಂಧಿತ ಆರೋಪಿಗಳು. ಮೌನೇಶ್ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಕಳೆದ 15 ದಿನಗಳ ಹಿಂದೆ ಒಂದೂವರೆ ಕೆ.ಜಿ. ಚಿನ್ನ ಕೊಟ್ಟು ಹಾಲ್‌ಮಾರ್ಕ್ ಹಾಕಿಸಿಕೊಂಡು ಬರಲು ಕಳಿಸಿದ್ದಾರೆ.

ಮೌನೇಶ್ ಚಿನ್ನ ತೆಗೆದುಕೊಂಡು ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಈ ಘಟನೆ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Leave a Reply

Your email address will not be published. Required fields are marked *

error: Content is protected !!