ಕಾಸರಗೋಡು: ಅಣೆಕಟ್ಟು ನಿರ್ಮಾಣಕ್ಕೆ ಸರ್ವೇ ನಡೆಸುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಿಬ್ಬಂದಿ ಮೃತ್ಯು
ಕಾಸರಗೋಡು: ಅಣೆಕಟ್ಟು ನಿರ್ಮಾಣಕ್ಕೆ ಸರ್ವೇ ನಡೆಸುತ್ತಿದ್ದಾಗ ನದಿ ಪಾಲಾಗಿ ನೌಕರರೋರ್ವ ಮೃತಪಟ್ಟ ಘಟನೆ ಪಯಸ್ವಿನಿ ಹೊಳೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಅಲಪ್ಪುಯದ ಟಿ.ನಿಖಿಲ್ (27) ಮೃತಪಟ್ಟವರು. ಒರಿಜಿನ್ ಎಂಬ ಕಂಪನಿಯ ಗುತ್ತಿಗೆ ನೌಕರರಾಗಿದ್ದರು.
ಅಣೆಕಟ್ಟು ನಿರ್ಮಾಣ ಕ್ಕಾಗಿ ಸರ್ವೇ ನಡೆಸಲು ನಿಖಿಲ್ ಸೇರಿದಂತೆ ನಾಲ್ವರ ತಂಡ ದಿನಗಳ ಹಿಂದೆಯೇ ಪಳ್ಳಂಗೋಡುಗೆ ತಲುಪಿದ್ದರು. ಈ ಪೈಕಿ ನಿಖಿಲ್ ಸೇರಿದಂತೆ ಇಬ್ಬರು ಮಂಗಳವಾರ ಮಧ್ಯಾಹ್ನ ಹೊಳೆಗೆ ಇಳಿದು ಸರ್ವೇ ನಡೆಸುತ್ತಿದ್ದಾಗ ಆಯತಪ್ಪಿ ನದಿಯಲ್ಲಿ ಮುಳುಗಿದ್ದಾರೆ.





