June 22, 2026

ಗೆಳೆಯನಿಗೆ ಚಾಕುವಿನಿಂದ ಇರಿದು ಹತ್ಯೆ

0
image_editor_output_image737792142-1740220050202.jpg

ಬೆಂಗಳೂರು: ಜೊತೆಗೆ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಮನೆಯ ಬಳಿಯೇ ಕಾದು ಗೆಳೆಯನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ವರ್ತೂರು ಬಳಿಯ ಕೊಡತಿಯಲ್ಲಿ ನಡೆದಿದೆ.

ಕೆಜಿಎಫ್ ಮೂಲದ ಸತೀಶ್ ರೆಡ್ಡಿ ಎಂಬಾತ ಕಾರು ಚಾಲಕನಾಗಿದ್ದು, ಪತ್ನಿ ಮೀನಾಳ ಜೊತೆ ನೆಮ್ಮದಿ ಜೀವನ ಸಾಗಿಸುತ್ತಿದ್ದ. ಈ ನಡುವೆ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ಚಿತ್ರದುರ್ಗ ಮೂಲದ ಕಿಶೋರ್ ಆಕಸ್ಮಿಕವಾಗಿ ಸ್ನೇಹಿತನಾಗಿದ್ದ‌.

ಆತ್ಮೀಯತೆ ಬೆಳೆದ ಬಳಿಕ ಆಗಾಗ ಕಿಶೋರ್ ವರ್ತೂರಿನ ಬಳಿಯಿದ್ದ ರೆಡ್ಡಿ ಮನೆಗೆ ಬಂದು ಹೋಗುತ್ತಿದ್ದ. ಹೀಗಿರುವಾಗ ಸತೀಶ್ ರೆಡ್ಡಿ ಪತ್ನಿ ಜೊತೆಗೆ ಕಿಶೋರ್ ಸ್ನೇಹ ಬೆಳೆಸಿದ್ದಾನೆ. ಹಾಗೇ ಇಬ್ಬರ ನಡುವೆ ಸಲುಗೆ ಹೆಚ್ಚಾಗಿದೆ.ಇದರಿಂದ ಸಂಶಯ ಪಟ್ಟು ದಂಪತಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು.

Leave a Reply

Your email address will not be published. Required fields are marked *

error: Content is protected !!