March 14, 2026

ಪ್ರವಾಸಕ್ಕೆಂದು ಹೊರಟಿದ್ದ ಕಾರು ಅಪಘಾತ: ಮಗು ಸಹಿತ ಮೂವರು ಮೃತ್ಯು

0
image_editor_output_image194277096-1740035167280.jpg

ಉತ್ತರಕನ್ನಡ: ಓವರಟೇಕ್ ಮಾಡುವ ಭರದಲ್ಲಿ ಲಾರಿಯೊಂದು ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಡೀ ಕುಟುಂಬ ದುರಂತ ಅಂತ್ಯ ಕಂಡಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಪ್ರವಾಸಕ್ಕೆಂದು ಕೊಪ್ಪಳದಿಂದ ಅಂಕೋಲಾ ಕಡೆಗೆ ಹೊರಟಿದ್ದ ಇಡೀ ಕುಟುಂಬ ಗಂಡ, ಹೆಂಡ್ತಿ ಹಾಗೂ ಮಗು ದುರಂತ ಅಂತ್ಯಕಂಡಿದ್ದಾರೆ. ಪತಿ ಆರ್ ವೆಂಕಟೇಶ್, ಪತ್ನಿ ಚೈತ್ರಾ ಹಾಗೂ 7 ತಿಂಗಳದ ಚಿಕ್ಕ ಮಗು ಶ್ರೀಹಾನ್ ಮೃತ ದುರ್ದೈವಿಗಳು.

ಮೃತ ಕುಟುಂಬ ಕೊಪ್ಪಳದಿಂದ ಪ್ರವಾಸಕ್ಕೆಂದು ಅಂಕೋಲಾ ಕಡೆಗೆ ಹೊರಟಿತ್ತು. ಆದ್ರೆ, ದುರದೃಷ್ಟವಶಾತ್ ಅರಬೈಲ್ ಘಟ್ಟ ಬಳಿ ಲಾರಿಯೊಂದು ಓವರಟೇಕ್ ಮಾಡುವ ಭರದಲ್ಲಿ ಎದುರಿನ ಕಾರಿಗೆ ಗುದ್ದಿದೆ. ಲಾರಿ ಗುದ್ದಿದ ರಭಸಕ್ಕೆ ಕಾರು ನುಜ್ಜಗುಜ್ಜಾಗಿದೆ. ಘಟನೆಯಲ್ಲಿ ಪತಿ, ಪತ್ನಿ ಹಾಗೂ ಮಗು ಸಹ ಮೃತಪಟ್ಟಿದೆ. ಇನ್ನು

Leave a Reply

Your email address will not be published. Required fields are marked *

error: Content is protected !!