March 14, 2026

KMJ SYS SSF KCF ಬಾರೆಬೆಟ್ಟು ವತಿಯಿಂದ ವಾಟರ್ ಕೂಲರ್ ಮತ್ತು ಮಕ್ಕಳ ಪ್ಲೇಟ್ ಇಡಲು ಅಲ್ಯಮಿನಿಯಂ ಸ್ಟಾಂಡ್ ವಿತರಣೆ

0
IMG-20250217-WA0019.jpg

ಬಂಟ್ವಾಳ: ಮುಹ್ಯುದ್ದೀನ್ ಜುಮಾ ಮಸ್ಜಿದ್ ಬಾರೆಬೆಟ್ಟು ಮದ್ರಸ ವಿಧ್ಯಾರ್ಥಿಗಳಿಗೆ ಮತ್ತು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ತಾಳಿತ್ತನೂಜಿಯ ವಿಧ್ಯಾರ್ಥಿಗಳಿಗೆ ಶುದ್ದ ನೀರು ಕುಡಿಯಲು ವಾಟರ್ ಕೂಲರ್ ಮತ್ತು ಶಾಲೆಯ ಮಕ್ಕಳಿಗೆ ಊಟದ ಪ್ಲೇಟ್ ಇಡುವ ಅಲ್ಯೂಮಿನಿಯಂ ಸ್ಟಾಂಡ್ ವಿತರಿಸಲಾಯಿತು.

ಮುಹ್ಯದ್ದೀನ್ ಜುಮಾ ಮಸ್ಜಿದ್‌ನಲ್ಲಿ ನಡೆದ 50ನೇ ಕುತುಬಿಯತ್ತ್ ವಾರ್ಷಿಕ ಕಾರ್ಯಕ್ರಮದ ಪ್ರಥಮ ದಿನದಂದು ಗೌರವಾನ್ವಿತ ಮಸೀದಿಯ ಅಧ್ಯಕ್ಷರಿಗೆ ಬಾರೆಬೆಟ್ಚು ಖತೀಬರಾದ ಉಸ್ತಾದ್ ಅಬ್ದುಲ್ ರಝಾಕ್ ಮದನಿ, KMJ ಅಧ್ಯಕ್ಷರಾದ ಹಸೈನಾರ್ ಮುಸ್ಲಿಯಾರ್, ಶರೀಫ್ ಸಅದಿ ಮತ್ತು KMJ SYS SSF ಸಂಘಟನಾ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು. ನಂತರ ದಿನಾಂಕ 17/02/25 ರಂದು ಬೆಳಿಗ್ಗೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ವಾಟರ್ ಕೂಲರ್ ಮತ್ತು ಪ್ಲೇಟ್ ಸ್ಟಾಂಡನ್ನು SDMC ಅಧ್ಯಕ್ಷರಾದ ಅಬ್ದಲ್ ಖಾಲಿದ್, ಅಧ್ಯಾಪಕರಾದ ಪ್ರದೀಪ್ ಸರ್ ಮತ್ತು ಹಿರಿಯ ಮುಖಂಡರಾದ ಗಂಗಾಧರ ಚೌಟ, ಯೂಸುಫ್ ಟಿ ಅವರ ಮೂಲಕ KMJ SYS SSF ಸಂಘಟನಾ ನೇತಾರರಾದ ಹಸೈನಾರ್ ಮುಸ್ಲಿಯಾರ್, ಶರೀಫ್ ಸಅದಿ, ರಝಾಕ್ T, ಶರೀಫ್ ಕುಲ್ಯಾರ್, ಅಲಿ ಹೈದರ್ ಮುಂತಾದವರು ಹಸ್ತಾಂತರ ಮಾಡಿದರು. ಈ ಸಮಯದಲ್ಲಿ ಶಾಲೆಯ ಮಾಜಿ ಅಧ್ಯಕ್ಷರಾದ ಅಬ್ದುಲ್ ಖಾದ್ರಿ, ಸೈಫ್, ಅಶ್ರಫ್, ನಿಯಾಝ್, ನಾಸಿರ್ ಟಿ ಮತ್ತಿತರ ಹಲವರು ಕಾರ್ಯಕರ್ತರು ಉಪಸ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!