March 14, 2026

ಕೊಡಂಗಾಯಿ: ಫೆ. 23ರಂದು  ಜಲಾಲಿಯ್ಯಾ ರಾತೀಬ್: ಪೋಸ್ಟರ್ ಪ್ರದರ್ಶನ

0
image_editor_output_image-879572495-1739811445919

ವಿಟ್ಲ: ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ವಿದ್ಯಾ ಸಂಸ್ಥೆಯಲ್ಲಿ ತಾರೀಕು 23/2/2025 ರಂದು ಆದಿತ್ಯವಾರ ರಾತ್ರಿ 7:00 ಗಂಟೆಗೆ ನಡೆಯುವ ಜಲಾಲಿಯ್ಯಾ ರಾತೀಬ್ ಕಾರ್ಯಕ್ರಮದ ಪ್ರಯುಕ್ತ ಸ್ನೇಹ ಸಂಗಮ ವಿಟ್ಲ ಸ್ಪೈಸ್ ಹೋಟೆಲ್ ನಲ್ಲಿ ಇಂದು ಸಂಸ್ಥೆಯ ಅಧ್ಯಕ್ಷರಾದ ಶೈಖುನಾ ವಾಲೆಮುಂಡೋವ್ ಉಸ್ತಾದ್ ಅಧ್ಯಕ್ಷತೆಯಲ್ಲಿ ಜರಗಿತ್ತು.

ಈ ಸಂದರ್ಭದಲ್ಲಿ ಸಂಗಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ.ಎಸ್ ಮೊಹಮ್ಮದ್ ಉದ್ಘಾಟಿಸಿದರು. ನಂತರ 23 ತಾರೀಕಿಗೆ ಟಿಪ್ಪು ನಗರ ದಾರುನ್ನಜಾತ್ ಸಂಸ್ಥೆಯಲ್ಲಿ ನಡೆಯಲಿರುವ  ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರ್ಯಕ್ರಮದ ಪೋಸ್ಟರ್ ಪ್ರದರ್ಶನ ನಡೆಸಲಾಯಿತು. ವಿಟ್ಲ ಸುನ್ನಿ ಕೋಡಿನೇಷನ್ ಸಮಿತಿಯ ಅಧ್ಯಕ್ಷರಾದ ಇಬ್ರಾಹಿಂ ಮದನಿ ಕಂಬಳಬೆಟ್ಟು, ಸಾಮಾಜಿಕ ಮುಖಂಡರಾದ ಶಾಕಿರ್ ಅಳಕ್ಕೆ ಮಜಲ್, SMA ಜಿಲ್ಲಾ ನಾಯಕರದ ಅಬ್ದುಲ್ ಹಕ್ಕೀಮ್ ಶಾಂತಿನಗರ, ಹಂದು ಹಾಜಿ ಸುಲೇಮಾನ್ ಉಮ್ಮರ್ ವಿಟ್ಲ, ಅಬೂಬಕ್ಕರ್ ಹಾಜಿ, ಅಬೂಬಕ್ಕರ್, ಮೊಯ್ದೀನ್ ಸಲೀಂ ಹಾಜಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶೈಖುನಾ ವಾಲೆಮುಂಡೋವ್ ಉಸ್ತಾದ್ ಸಂಸ್ಥೆಯ ಹಿತೈಷಿಗಳಿಗೆ ಹಾಗೂ ಸರ್ವರಿಗೂ ವಿಶೇಷ ಪ್ರಾರ್ಥನೆ ನಡೆಸಿದರು. ನಂತರ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!