March 15, 2026

ಬಂದೂಕಿನಿಂದ ಪೈರಿಂಗ್ ಮಾಡಿದ 13 ವರ್ಷದ ಬಾಲಕ: 3 ವರ್ಷದ ಬಾಲಕ ಸಾವು

0
image_editor_output_image-1886270880-1739778952120.jpg

ಮಂಡ್ಯ: 13 ವರ್ಷದ ಬಾಲಕನೊಬ್ಬ ಅಸಲಿ ಬಂದೂಕು ಎಂದು ತಿಳಿಯದೇ ಫೈರಿಂಗ್ ಮಾಡಿದ ಪರಿಣಾಮ 3 ವರ್ಷದ ಬಾಲಕ ಸಾವನಪ್ಪಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ದೊಂದೇಮಾದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದವರಾದ ಶಶಾಂಕ್ ಹಾಗೂ ಲಿಪಿಕಾ ದಂಪತಿಯ ಮಗ ಅಭಿಷೇಕ್(3) ಮೃತಪಟ್ಟ ಬಾಲಕ. ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಅವರ ಕೋಳಿ ಫಾರಂನಲ್ಲಿ ಕಳೆದು ಕೆಲವು ವರ್ಷಗಳಿಂದ ಈ ದಂಪತಿ ಕೆಲಸ ಮಾಡುತ್ತಿದ್ದರು. ದಂಪತಿಯನ್ನು ಭೇಟಿಯಾಗಲು ಭಾವಶಂಕರ್ ದಾಸ್ ಹಾಗೂ ಆತನ ಮಗ ಸುದೀಪ್ ದಾಸ್ ಬಂದಿದ್ದರು. ಈ ವೇಳೆ ಮಕ್ಕಳಿಬ್ಬರು ಆಟವಾಡುತ್ತಿದ್ದರು.

ಆಟವಾಡುತ್ತಿದ್ದಾಗ ಪರವಾನಗಿ ಪಡೆದು ಇಟ್ಟುಕೊಂಡಿದ್ದ ನರಸಿಂಹಮೂರ್ತಿ ಅವರ ಬಂದೂಕು ಸುದೀಪ್ ಕೈಗೆ ಸಿಕ್ಕಿದ್ದು, ಅಸಲಿ ಬಂದೂಕು ಎಂದು ತಿಳಿಯದೇ ಫೈರಿಂಗ್ ಮಾಡಿದ್ದಾನೆ. ಪರಿಣಾಮ ಅಲ್ಲಿಯೇ ಇದ್ದ ಅಭಿಷೇಕ್ ಹೊಟ್ಟೆಯೊಳಗೆ ಗುಂಡು ಹೊಕ್ಕಿದ್ದು, ತಾಯಿ ಲಿಪಿಕಾ ಕೂಡ ಗಾಯಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!