August 8, 2026

ಪ್ರಗತಿಪರ ಕೃಷಿಕ ಇಬ್ರಾಹಿಂ ಹಾಜಿ THMA ಕುದ್ದುಪದವು ಇನ್ನಿಲ್ಲ

0
image_editor_output_image-889668919-1786167945795

ವಿಟ್ಲ ಸಮೀಪದ ಕುದ್ದುಪದವು ಕಬ್ಬಿನಹಿತ್ಲು ನಿವಾಸಿ ಪ್ರಗತಿಪರ ಕೃಷಿಕರಾದ ಇಬ್ರಾಹಿಂ ಹಾಜಿ THMA (78) ಅವರು ಅಲ್ಪಕಾಲದ ಅಸೌಖ್ಯದಿಂದ 08-08-2026 ಶನಿವಾರ ಬೆಳಗ್ಗಿನ ಜಾವ 05:00 ಗಂಟೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಪ್ರಸಿದ್ಧ ಉದ್ಯಮಿ, ಧಾರ್ಮಿಕ ನೇತಾರರಾಗಿದ್ದ ಮರ್ಹೂಮ್ ಅಬ್ಬಾಸ್ ಹಾಜಿ THMA ಉಕ್ಕುಡ ಅವರ ಪುತ್ರರಾಗಿರುವ ಇಬ್ರಾಹಿಂ ಹಾಜಿ ತನ್ನ ಎಳೆಯ ಪ್ರಾಯದಲ್ಲಿ ಕೋರೆ ಉದ್ಯಮ ಹಾಗೂ ದಿನಸಿ ಅಂಗಡಿಯಲ್ಲಿ ತಂದೆಯ ಜೊತೆಗೆ ತೊಡಗಿಸಿಕೊಂಡಿದ್ದರು. ಕಠಿಣ ಶ್ರಮ ಜೀವಿಯಾಗಿದ್ದ ಮೃತರು ನಂತರದ ದಿನಗಳಲ್ಲಿ ಸ್ವಂತ ಕೃಷಿಕರಾಗಿ ದುಡಿದು “ಉತ್ತಮ ಕೃಷಿಕ ಪ್ರಶಸ್ತಿ”ಗೆ ಭಾಜನರಾಗಿದ್ದರು. ಕನ್ನಡ ಸಾಹಿತ್ಯದಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದ ಸೌಮ್ಯ ಸ್ವಭಾವದ ಇಬ್ರಾಹಿಂ ಹಾಜಿ ಸಾಹಿತ್ಯ ಲೋಕದಲ್ಲಿ ಅಪಾರವಾದ ಜ್ಞಾನ ಭಂಡಾರವನ್ನು ಹೊಂದಿದ್ದರು.

ಮೃತರು ಪತ್ನಿ ನೆಬಿಸಾ ಹಜ್ಜುಮ್ಮ, ಮೂವರು ಪುತ್ರರಾದ ಗಲ್ಫ್ ಉದ್ಯೋಗಿ ಬಶೀರ್, ಉದ್ಯಮಿ ಮಂಗಳಪದವು ಐಡಿಯಲ್ ಫ್ಯುಯೆಲ್ಸ್ ಪೆಟ್ರೋಲ್ ಪಂಪಿನ ಹನೀಫ್ ಕುದ್ದುಪದವು, ಬೆಂಗಳೂರು ಎಮಿರೇಟ್ಸ್ ಗ್ರೂಪ್ ಹೋಟೆಲ್ ಉದ್ಯಮಿ ಮಹಮ್ಮದ್ ಶರೀಫ್, ಇಬ್ಬರು ಪುತ್ರಿಯರಾದ ಸುಹೈಬಾ ಸಕಲೇಶಪುರ ಹಾಗೂ ಸೌದಾ ಬೀವಿ ಪೆರ್ಲ ಅವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!