ಪದೇ ಪದೇ ಟ್ರಾಫಿಕ್ ನಿಮಯ ಉಲ್ಲಂಘನೆ: ಬೈಕ್ ಸವಾರನಿಗೆ 1.61 ಲಕ್ಷ ರೂ. ದಂಡ ವಿಧಿಸಿದ ಪೊಲೀಸರು

ಬೆಂಗಳೂರು: ಸಂಚಾರಿ ನಿಮಯ ಉಲ್ಲಂಘನೆ ಮಾಡಿದ ಬೈಕ್ ಸವಾರ ಬರೋಬ್ಬರಿ 1.61 ಲಕ್ಷ ರೂ. ದಂಡ ಪಾವತಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೆಎ05 ಜೆಡ್‌ಎಕ್ಸ್1344 ನಂಬರ್‌ನ ಸ್ಕೂಟರ್‌ನಿಂದ ಹೆಲ್ಮೆಟ್, ಸಿಗ್ನಲ್ ಜಂಪ್ ಹೀಗೆ ಹಲವು ರೀತಿಯಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಾಗಿತ್ತು. ಇದೀಗ ಸ್ಕೂಟರ್ ಸವಾರ ಕೊನೆಗೂ ಕಾನೂನಿಗೆ ತಲೆ ಬಾಗಿದ್ದಾನೆ. ತನ್ನ ಬೈಕ್ ಮೇಲಿದ್ದ 1.61 ರೂ. ದಂಡದ ಮೊತ್ತ ಪಾವತಿಸಿದ್ದಾರೆ.