ವಿಟ್ಲ: ಪರೀಕ್ಷೆಯನ್ನು ಸಂಭ್ರಮಿಸಿ; ಬಂಟ್ವಾಳ ಜಮೀಯ್ಯತುಲ್ ಫಲಾಹ್ ಕಾರ್ಯಾಗಾರದಲ್ಲಿ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ.

ವಿಟ್ಲ; ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಪ್ರಥಮ ಘಟ್ಟ. ಅದನ್ನು ಗಣನೆಗೆ ತೆಗೆದುಕೊಂಡು ಪರೀಕ್ಷೆಯನ್ನು ಭಯಪಡದೇ ಸಂತೋಷದಿಂದ ಸಂಭ್ರಮಿಸಿ ತೇರ್ಗಡೆಯಾಗಬೇಕು. ಆ ಮೂಲಕ ಹೆತ್ತವರ, ಶಿಕ್ಷಕರ ಪ್ರೀತಿಗೆ ಪಾತ್ರರಾಗಬೇಕು ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಮಂಜುನಾಥನ್ ಹೇಳಿದರು.
ಅವರು ಮಂಗಳವಾರ (04-02) ವಿಟ್ಲ ಬ್ರೈಟ್ ಅಡಿಟೋರಿಯಂ ನಲ್ಲಿ ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಪೂರ್ವ ಏಕದಿನ ಕಾರ್ಯಾಗಾರ “ಚೈತನ್ಯ ಚಿಲುಮೆ” ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಸ್ಟೈಲ್ ಪಾರ್ಕ್ ಮಾಲಕ ಆರ್.ಕೆ. ಅಬ್ದುಲ್ಲ ಹಾಜಿ, ವಿ.ಎಚ್. ಕಾಂಪ್ಲೆಕ್ಸ್ ಮಾಲಕ ವಿ.ಎಚ್. ಅಶ್ರಫ್, ಶಿಕ್ಷಣ ಸಂಯೋಜಕಿ ಸುಧಾ, ಸಿ.ಆರ್.ಪಿ.ಒ. ಬಿಂದು ಮುಖ್ಯ ಅತಿಥಿಯಾಗಿದ್ದರು. ಕಸ ಸಂಗ್ರಹಿಸುವ ಸ್ವಚ್ಛವಾಹಿನಿ ಚಾಲಕರಾಗಿ ಪ್ರಸಿದ್ಧಿ ಪಡೆದ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೆಫೀಸಾ ಪೆರುವಾಯಿ ಹಾಗೂ ಉದ್ಯಮಿ ಆರ್.ಕೆ. ಅಬ್ದುಲ್ಲ ಹಾಜಿ ಕಾನತ್ತಡ್ಕ ಅವರನ್ನು ಸನ್ಮಾನಿಸಲಾಯಿತು.

ರಾಷ್ಟ್ರಪ್ರಶಸ್ತಿ ಗಣಿತ ಶಿಕ್ಷಕ ಯಾಕೂಬ್ ಕೊಯ್ಯೂರು, ಕಾರ್ಮೆಲ್ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ರೋಶನ್ ಅಲೆಕ್ಸಾಂಡರ್ ಪಿಂಟೋ ಹಾಗೂ ಪ್ರಸಿದ್ಧ ಜಾದೂಗಾರ ಕುದ್ರೋಳಿ ಗಣೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಉಸ್ಮಾನ್ ಹಾಜಿ ಕರೋಪಾಡಿ, ಅಬೂಬಕರ್ ನೋಟರಿ, ಅಬ್ದುಲ್ ರಝಾಕ್ ಅನಂತಾಡಿ, ಹಕೀಮ್ ಕಲಾಯಿ, ಪಿ. ಮಹಮ್ಮದ್, ಶೇಖ್ ರಹ್ಮತುಲ್ಲಾ, ಅಬ್ಬಾಸ್ ಅಲಿ ಬೋಳಂತೂರು, ಶಾಕಿರ್ ಅಳಕೆಮಜಲು, ಉಬೈದ್ ವಿಟ್ಲ, ಹಮೀದ್ ಟಿಎಚ್ಎಂಎ, ಇಕ್ಬಾಲ್ ಶೀತಲ್, ಹಮೀದ್ ದೇಲಂತಬೆಟ್ಟು, ಹನೀಫ್ ಟಿಎಚ್ಎಂಎ, ಅಬೂಬಕರ್ ಅನಿಲಕಟ್ಟೆ, ಡಿಎಂ ರಶೀದ್ ಉಕ್ಕುಡ, ಶರೀಫ್ ಫ್ಯಾನ್ಸಿಪಾರ್ಕ್, ಮಹಮ್ಮದಲಿ ವಿಟ್ಲ ಉಪಸ್ಥಿತರಿದ್ದರು.

