ನೇರಳಕಟ್ಟೆ ಸಹಕಾರಿ ಸಂಘದ ಚುನಾವಣೆ: ಬಿಜೆಪಿ ಜಯಭೇರಿ

ಬಂಟ್ವಾಳ: ತಾಲೂಕಿನ ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸಹಕಾರ ಭಾರತಿ ಬೆಂಬಲಿತ ಸದಸ್ಯರು 13 ರಲ್ಲಿ 13 ಸ್ಥಾನಗಳಲ್ಲೂ ಗೆದ್ದು ಜಯಭೇರಿ ಬಾರಿಸಿದ್ದಾರೆ.

ನೇರಳಕಟ್ಟೆಯ ಸಂಘದ ಪ್ರಧಾನ ಕಛೇರಿಯಲ್ಲಿ ಬುಧವಾರ ಚುನಾವಣೆ ನಡೆದಿದ್ದು, ರಾತ್ರಿ ವೇಳೆಗೆ ಫಲಿತಾಂಶ ಪ್ರಕಟಗೊಂಡಿದೆ.
13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ರೈತ ಹಿತರಕ್ಷಣಾ ವೇದಿಕೆಯ ಬೆಂಬಲಿತ ಅಭ್ಯರ್ಥಿಗಳು 13 ಸ್ಥಾನಗಳಲ್ಲೂ ಸ್ಪರ್ಧಿಸಿದ್ದು, ಎಲ್ಲಾ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಬಿಜೆಪಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಾದ ಪುಷ್ಪರಾಜ್ ಚೌಟ, ನಾರಾಯಣ ಶೆಟ್ಟಿ, ಅಶೋಕ ರೈ ಎನ್.ಕೆ., ರಾಘವ, ಶ್ರೀನಿವಾಸ, ಸನತ್ ಕುಮಾರ್, ವೆಂಕಟೇಶ್ ಕೋಟ್ಯಾನ್, ತನಿಯಪ್ಪ ಗೌಡ ಡಿ., ಸಂಕಪ್ಪ ಜೆ, ಸುಧಾಕರ, ಭಾರತಿ, ಶಕೀಲಾ ಕೃಷ್ಣ ಪೂಜಾರಿ ಹಾಗೂ ಅರುಣ್ ಕುಮಾರ್ ವಿಜಯ ಗಳಿಸಿದ್ದಾರೆ.