January 31, 2026

ಕಾರ್ಕಳ: ಮಂಗಳೂರಿಗೆ ತೆರಳಿದ್ದ ಯುವತಿ ನಾಪತ್ತೆ

0
image_editor_output_image-213047109-1738021556446.jpg

ಕಾರ್ಕಳ : ಮಂಗಳೂರಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದ ಯುವತಿ ನಾಪತ್ತೆಯಾದ ಘಟನೆ ಕಾರ್ಕಳದಲ್ಲಿ ಜ. 19 ರಂದು ಸಂಭವಿಸಿದೆ.

ಸಂಗೀತಾ (22) ನಾಪತ್ತೆಯಾದವರು. ಮೂಲತ: ಉತ್ತರ ಕನ್ನಡ ಜಿಲ್ಲೆಯ ಮುಂಡುಗೋಡು ತಾಲೂಕು ಶೀಡ್ಲಗುಂಡಿ ಗ್ರಾಮದವರಾದ ಇವರು ಜ. 19ರಂದು ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಜೋಗುಳಬೆಟ್ಟು ಎಂಬಲ್ಲಿ ವಾಸವಿರುವ ಚಿಕ್ಕಪ್ಪನ ಮನೆಗೆ ಬಂದಿದ್ದು ಅಲ್ಲಿಂದ ಮಧ್ಯಾಹ್ನ 1 ಗಂಟೆಗೆ ಮಂಗಳೂರಿಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದಾರೆ.

ಆದರೆ ಆ ಬಳಿಕ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ಬಗ್ಗೆ ಮಾಹಿತಿ 08258-230213, 233100 9480805461 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!