ದಾರುನ್ನಜಾತ್ ವಿದ್ಯಾಸಂಸ್ಥೆಯಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ

ವಿಟ್ಲ: ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಕೊಡಂಗಾಯಿ ವಿದ್ಯಾ ಸಂಸ್ಥೆಯಲ್ಲಿ ಇಂದು ಬೆಳಿಗ್ಗೆ 7.30 ಕ್ಕೆ ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪರಸ್ಪರ ಸೌಹಾರ್ದತೆಯಿಂದ ಭಾರತೀಯರಾದ ಪ್ರತಿಯೊಬ್ಬರು ಜೀವಿಸುವುದರ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡೋಣ,ವಿದ್ಯಾರ್ಥಿಗಳು ಭಾರತದ ಸಂವಿಧಾನದ ಬಗ್ಗೆ ಕಲಿತುಕೊಂಡರೆ ಮಾತ್ರ ಇಂದಿನ ಪೀಳಿಗೆ ಮುಂದಿನ ಭವಿಷ್ಯದ ನಾಯಕರು ಆಗೋದು ಆದ್ದರಿಂದ ಗೌರವ ಪ್ರೀತಿ ಸಹೋದರತೆ ವಿದ್ಯಾರ್ಥಿಗಳ ನಡೆತದಲ್ಲಿ ಇರಬೇಕು ಎಂದು ಹಿತನುಡಿ ಹೇಳಿದರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮದರಸ ಸದರ್ ಶಿಹಾಬುದ್ದೀನ್ ಸಖಾಫಿ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಬೋಧಿಸಿ ಪ್ರಾರ್ಥನೆ ನಡೆಸಿದರು ಕೊನೆಗೆ ಹಾಫಿಳ್ ಶರೀಫ್ ಮುಸ್ಲಿಯರ್ ಸ್ವಾಗತಿಸಿ ವಂದಿಸಿದರು