ಕೊಡಾಜೆ: ತರ್ಬಿಯತುಲ್ ಇಸ್ಲಾಂ ಮದ್ರಸದಲ್ಲಿ ಗಣರಾಜ್ಯೋತ್ಸವ ದಿನಾಚರಣೆ
ಕೊಡಾಜೆ: ಇಲ್ಲಿನ ಬದ್ರಿಯಾ ಜುಮಾ ಮಸೀದಿ ಇದರ ಅಧೀನದ ತರ್ಬಿಯತುಲ್ ಇಸ್ಲಾಂ ಮದ್ರಸದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಯನ್ನು ಆಚರಿಸಲಾಯಿತು.

ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಧ್ವಜಾರೋಹಣಗೈದರು. ಸ್ಥಳೀಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ದು:ಹಾ ನೆರವೇರಿಸಿದರು.
ಮದ್ರಸ ಮುಖ್ಯ ಶಿಕ್ಷಕ ಪಿ.ಎ.ಝಕರಿಯಾ ಅಸ್ಲಮಿ ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನದ ಚೌಕಟ್ಟಿನೊಳಗೆ ಬದುಕುವುದರ ಜೊತೆಗೆ ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮಸೀದಿ ಕೋಶಾಧಿಕಾರಿ ಪಿ.ಕೆ.ಅಬ್ಬಾಸ್ ಪರ್ಲೊಟ್ಟು, ಜೊತೆ ಕಾರ್ಯದರ್ಶಿ ಸಾಹುಲ್ ಹಮೀದ್ ಪರ್ಲೊಟ್ಟು, ಸದಸ್ಯ ಇಸ್ಮಾಯಿಲ್ ನೇರಳಕಟ್ಟೆ, ಮಸೀದಿ ಮಾಜಿ ಅಧ್ಯಕ್ಷ ಇಬ್ರಾಹಿಂ ರಾಜ್ ಕಮಲ್, ಕೊಡಾಜೆ ಮಸೀದಿ ಪುನರ್ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಸಹೀದ್ ನೇರಳಕಟ್ಟೆ, ಕಾರ್ಯದರ್ಶಿ ಇಂಜಿನಿಯರ್ ನವಾಝ್ ನೇರಳಕಟ್ಟೆ, ಮದ್ರಸ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಹೀಂ ಸುಲ್ತಾನ್, ಕಾರ್ಯದರ್ಶಿ ಇಂಜಿನಿಯರ್ ಲತೀಫ್ ಕೊಡಾಜೆ, ಕೊಡಾಜೆ ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಉಪಾಧ್ಯಕ್ಷ ಅಶ್ರಫ್ ತಿಂಗಳಾಡಿ, ಮದ್ರಸ ಶಿಕ್ಷಕರುಗಳಾದ ಮಕ್ಬೂಲ್ ಫೈಝಿ, ಇಬ್ರಾಹಿಂ ಬಾತಿಷಾ ಇರ್ಫಾನಿ, ಅಬ್ದುಲ್ ರಶೀದ್ ಅಝ್ಅರಿ, ಹಾರಿಸ್ ಮುಸ್ಲಿಯಾರ್, ಅಶ್ರಫ್ ಯಮಾನಿ, ಪ್ರಮುಖರಾದ ಇಲ್ಯಾಸ್ ನೇರಳಕಟ್ಟೆ, ಇಬ್ರಾಹಿಂ ಹಾಜಿ ನೆಡ್ಯಾಲು, ಅತಾವುಲ್ಲಾ ನೇರಳಕಟ್ಟೆ, ಇಂಜಿನಿಯರ್ ಫಾರೂಕ್, ರವೂಫ್ ಕೊಡಾಜೆ, ಆಸಿಫ್ ನೇರಳಕಟ್ಟೆ, ಅಬ್ದುಲ್ ಖಾದ್ರಿ ಪಂತಡ್ಕ ಮೊದಲಾದವರು ಉಪಸ್ಥಿತರಿದ್ದರು.
ಬದ್ರಿಯಾ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಎಸ್.ಎಂ.ರಫೀಕ್ ಹಾಜಿ ನೇರಳಕಟ್ಟೆ ಸ್ವಾಗತಿಸಿ, ಸದಸ್ಯ ಲತೀಫ್ ನೇರಳಕಟ್ಟೆ ವಂದಿಸಿದರು.




