March 20, 2025

ಕಾಸರಗೋಡು: ಮದುವೆ ನಿಶ್ಚಿಯವಾದ ಯುವಕ ನೇಣು ಬಿಗಿದು ಆತ್ಮಹತ್ಯೆ

0

ಕಾಸರಗೋಡು: ಮದುವೆ ನಿಶ್ಚಿಯವಾದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ಸಂಜೆ ಮೀಂಜ ಸಮೀಪದ ಬೆಜ್ಜ ದಲ್ಲಿ ನಡೆದಿದೆ.

ಮೀಂಜ ಸಮೀಪದ ಬೆಜ್ಜದ ಅಜಿತ್ ಕುಮಾರ್ (28) ಮೃತಪಟ್ಟವರು.

ಫೆಬ್ರವರಿ ಎರಡರಂದು ವಿವಾಹ ನಿಗದಿಯಾಗಿತ್ತು. ಸಂಜೆ ಮನೆ ಸಮೀಪದ ಮರವೊಂದರಲ್ಲಿ ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಜಿತ್ ಕುಮಾರ್ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ನ ಉಪ್ಪಳ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅಜಿತ್ ಗೆ ಹೊಸಂಗಡಿ ಸಮೀಪದ ಯುವತಿ ಜೊತೆ ವಿವಾಹ ನಿಶ್ಚಯವಾಗಿತ್ತು.

 

 

ಶುಕ್ರವಾರ ಮನೆಯವರು ವಿವಾಹ ಸಾಮಾಗ್ರಿ ಖರೀದಿಸಲು ಪೇಟೆಗೆ ತೆರಳಿದ್ದರು. ಮನೆಯಲ್ಲಿ ಚಿಕ್ಕಪ್ಪ ಮಾತ್ರ ಇದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೃತ್ಯ ಎಸಗಲಾಗಿದೆ. ಸಂಜೆ ಅಜಿತ್ ಮನೆ ಮುಂಭಾಗದ ಮಾವಿನ ಮರದಲ್ಲಿ ಕೇಬಲ್ ವಯರ್ ನಲ್ಲಿ ನೇಣು ಬಿಗಿದಿರುವುದನ್ನು ಮನೆಯವರು ಗಮನಿಸಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದರು.

ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!