ಮಂಗಳೂರಿನಲ್ಲಿ ಹೋ ಸ್ಟೇ ದಾಳಿ ಮಾದರಿಯಲ್ಲಿ ಮಸಾಜ್ ಸೆಂಟರ್ ಗೆ ದಾಳಿ ನಡೆಸಿದ ಶ್ರೀರಾಮಸೇನೆ

ಮಂಗಳೂರಿನಲ್ಲಿ ಹೋಂ ಸ್ಟೇ ದಾಳಿ, ಪಬ್ ದಾಳಿ ಯನ್ನು ನೆನಪಿಸುವ ರೀತಿಯಲ್ಲಿ ಇಂದು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ಯುನಿಸೆಕ್ಸ್ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಕಲರ್ಸ್ ಹೆಸರಿನ ಮಸಾಜ್ ಸೆಂಟರ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಅನ್ನುವ ಆರೋಪದಲ್ಲಿ ದಾಳಿ ನಡೆಸಲಾಗಿದೆ ಅನ್ನಲಾಗಿದೆ.
ಶ್ರೀರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ನೇತೃತ್ವದ ಹುಡುಗರು ದಾಳಿ ನಡೆಸಿದ್ದು ಎನ್ನಲಾಗಿದ್ದು, ದಾಳಿ ನಡೆಸುವ ವೇಳೆ ಕ್ಯಾಮರಾಮೆನ್ ಕರೆದುಕೊಂಡು ಹೋಗಿದ್ದರು ಅನ್ನಲಾಗಿದ್ದು ದಾಳಿಯ ವಿಡಿಯೋ ಬಿಡುಗಡೆ ಮಾಡಿದ್ದಾರೆ ಅನ್ನಲಾಗಿದೆ. ದಾಳಿಯ ವೇಳೆ ದಾಂಧಲೆ ನಡೆಸಿದ್ದು ಪೀಠೋಪಕರಣ, ಕಂಪ್ಯೂಟರ್ ಸೆಟ್ ಪುಡಿಗೈದಿರುವುದಾಗಿ ತಿಳಿದು ಬಂದಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ಈ ಘಟನೆ ನಡೆದಿದೆ.