ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ: ಚಕ್ರವರ್ತಿ ಸೂಲಿಬೆಲೆ

ರಾಯಚೂರು: ರಾಜ್ಯ ಸರ್ಕಾರ ಮುಸ್ಲಿಮರ ನಿಯಂತ್ರಣದಲ್ಲಿದೆ. ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ ಎಂದು ಹೇಳುವಾಗ ಇನ್ನೂ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಯುವ ಬ್ರಿಗೆಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವೆಲ್ಲ ಪೂಜಿಸುವ ಗೋವಿನ ಕೆಚ್ಚಲು ಕತ್ತರಿಸಿದವನಿಗೆ ಹುಚ್ಚ ಎನ್ನುವ ಪಟ್ಟ ಕಟ್ಟಲಾಗುತ್ತಿದೆ. ಆ ಹುಚ್ಚನಿಗೆ ಗೋವಿನ ಕೆಚ್ಚಲನ್ನೆ ಯಾಕೆ ಕಡಿಯಬೇಕು ಎನಿಸಿತು. ನಾಯಿಯದ್ದೊ ಮತ್ಯಾವುದೋ ಪ್ರಾಣಿಯದ್ದು ಯಾಕೆ ಕಡಿಯಬೇಕು ಎನಿಸಿಲಿಲ್ಲ. ಆತನಿಗೆ ಈ ಆಲೋಚನೆ ಬಂದಿದ್ದು ಯಾವ ಪ್ರಾರ್ಥನಾ ಮಂದಿರದಿಂದ ಎನ್ನುವುದನ್ನು ಸರ್ಕಾರ ತಿಳಿಸಬೇಕು ಎಂದು ತಾಕೀತು ಮಾಡಿದರು.