March 18, 2025

ಜನವರಿ 18ರಿಂದ ಮಂಗಳೂರು ಪುಡ್ ಫೆಸ್ಟಿವಲ್ ಗೆ ಡಾಲಿ ಚಾಯ್ ವಾಲ

0

ಮಂಗಳೂರು: ಜನವರಿ 18ರಿಂದ ಪ್ರಾರಂಭವಾಗಲಿರುವ ಮಂಗಳೂರು ಫುಡ್ ಫೆಸ್ಟಿವಲ್ ಗೆ ಸೋಶಿಯಲ್ ಮಿಡಿಯಾ ಟ್ರೆಂಡ್ ಖ್ಯಾತ ಡಾಲಿ ಚಾಯ್ ವಾಲ ಆಗಮಿಸಲಿದ್ದಾರೆ.

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಜನವರಿ 18 ರಿಂದ 22ರ ವರೆಗೆ ಐದು ದಿನಗಳ ಕಾಲ ನಗರದಲ್ಲಿ “ಮಂಗಳೂರು ಸ್ಟ್ರೀಟ್‌ ಫುಡ್‌ ಫಿಯೆಸ್ಟ’ ನಡೆಯಲಿದೆ. ಈ ಕಾರ್ಯಕ್ರಮದ ಮೊದಲ ದಿನದ ಆಕರ್ಷಣೆಯಾಗಿ ಡಾಲಿ ಚಾಯ್‌ವಾಲ ಅವರು ಭಾಗವಹಿಸಲಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಜನವರಿ 18ರಂದು ಮಂಗಳೂರಿನಲ್ಲಿ ಸಿಗುತ್ತೇನೆ.

“ಮಜಾ ಕರೇಂಗೆ .. ಚಾಯ್‌ ಪಿಯೇಂಗೆ’ ಎಂದು ಪೋಸ್ಟ್‌ ಮಾಡಿದ್ದಾರೆ. ಮೈಕ್ರೋಸಾಪ್ಟ್ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರು ಡಾಲಿ ಅವರ ಚಹಾ ಅಂಗಡಿಗೆ ಭೇಟಿ ನೀಡಿ ಚಹಾ ಕುಡಿದು ಪೋಸ್ಟ್‌ ಹಂಚಿದ್ದರು. ಇದಾದ ಬಳಿ ಡಾಲಿ ಚಾಯ್‌ವಾಲ ಅವರು ದೇಶಾದ್ಯಂತ ಇನ್ನಷ್ಟು ಪರಿಚಿತರಾದರು.

 

 

Leave a Reply

Your email address will not be published. Required fields are marked *

error: Content is protected !!