ಕಾಪು: ಪೇಟೆಯಲ್ಲಿ ಚಹಾ ಮಾರಿಕೊಂಡಿದ್ದ ವ್ಯಕ್ತಿ ನಾಪತ್ತೆ

ಕಾಪು: ಕಾಪು ಪೇಟೆಯಲ್ಲಿ ಚಹಾ ಮಾರಿಕೊಂಡಿದ್ದ ಉಳಿಯಾರಗೋಳಿ ನಿವಾಸಿ ರಾಮ ದೇವಾಡಿಗ (64) ಜ. 10ರಿಂದ ನಾಪತ್ತೆಯಾಗಿದ್ದಾರೆ.
ಕುಂಜೂರು ಮೂಲದ ಅವರು ದುಬಾೖಯಲ್ಲಿದ್ದರು. ಎರಡು ತಿಂಗಳ ಹಿಂದೆ ಅಲ್ಲಿಂದ ಮರಳಿದ್ದು ಕಾಪು ಉಳಿಯಾರಗೋಳಿಯಲ್ಲಿ ವಾಸವಿದ್ದರು. ಕಾಪು ಪೇಟೆಯಲ್ಲಿ ಚಹಾ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು.
ಜ. 10ರಂದು ಬೆಳಗ್ಗೆ ಚಹಾ ಮಾರಾಟ ಮಾಡಿ ಮನೆಗೆ ಬಂದು ಮಧ್ಯಾಹ್ನ 1 ಗಂಟೆಗೆ ತರಕಾರಿ ತರುವುದಾಗಿ ಕಾಪು ಪೇಟೆಗೆ ಹೋದವರು ಮರಳಿ ಬಂದಿರುವುದಿಲ್ಲ.