March 18, 2026

ಉಡುಪಿ: ಸಾಸ್ತಾನ ಟೋಲ್ ಗೇಟ್ ಗೆ ನುಗ್ಗಿದ ಟಿಪ್ಪರ್ ಲಾರಿ

0
image_editor_output_image-11824772-1736760018630.jpg

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಗೇಟ್ ಗೆ ನುಗ್ಗಿದ ಘಟನೆ ಭಾನುವಾರ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.

ಜಲ್ಲಿ ಕಲ್ಲು ತುಂಬಿಕೊಂಡು ಬ್ರಹ್ಮಾವರ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸಾಸ್ತಾನ ಟೋಲ್ ಗೇಟ್ ಗೆ ಢಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಟೋಲ್ ಗೇಟ್ ಜಖಂ ಗೊಂಡಿದೆ. ಮೇಲ್ನೋಟಕ್ಕೆ ಚಾಲಕ ಮದ್ಯಪಾನ ಮಾಡಿ ಟಿಪ್ಪರ್ ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ.

ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!