March 18, 2026

ಕುಂದಾಪುರ: ಹೊಟೇಲ್ ಮುಂದೆ ನಿಲ್ಲಿಸಿದ ಕಾರಿಗೆ ಢಿಕ್ಕಿ ಹೊಡೆದ ಬಸ್

0
image_editor_output_image1787300400-1736772791581.jpg

ಕುಂದಾಪುರ: ದುರ್ಗಾಂಬಾ ಮೋಟಾರ್ಸ್ ಸಂಸ್ಥೆಗೆ ಸೇರಿದ್ದ ಖಾಸಗಿ ಬಸ್ ಒಂದು ಡ್ರೈವರ್ ಇಲ್ಲದೆ ಚಲಿಸಿ ರಸ್ತೆ ಹಾಗೂ ಡಿವೈಡರ್ ದಾಟಿ ಹೊಟೇಲ್ ಒಂದರ ಮುಂದೆ ನಿಲ್ಲಿಸಿದ ಕಾರಿಗೆ ಡಿಕ್ಕಿ ಹೊಡೆದ ಘಟನೆ ಕುಂದಾಪುರ ಹೊರವಲಯದ ಹಂಗಳೂರು ಎಂಬಲ್ಲಿ ನಡೆದಿದೆ.

ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಕಮ್ಮಿಯಿದ್ದರಿಂದ ಹಾಗೂ ಪಾದಾಚಾರಿಗಳು ಓಡಾಟವಿಲ್ಲದ ಕಾರಣ ಅದೃಷ್ಟವಶಾತ್ ಭಾರೀ ಅವಘಡ ತಪ್ಪಿದೆ ಎನ್ನಲಾಗಿದೆ. ಘಟನೆ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

Leave a Reply

Your email address will not be published. Required fields are marked *

error: Content is protected !!