March 18, 2026

ಮೊಬೈಲ್ ಕೊಡಿಸಲಿಲ್ಲ ಎಂದು ಪುತ್ರ ಆತ್ಮಹತ್ಯೆ: ಮನನೊಂದು ತಂದೆಯೂ ಆತ್ಮಹತ್ಯೆ

0
image_editor_output_image-649398811-1736748264477.jpg

ನಾಂದೇಡ್: ಅಪ್ಪ ಮೊಬೈಲ್ ಕೊಡಿಸಲಿಲ್ಲ ಎಂದು 16 ವರ್ಷದ ಬಾಲಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಮಗನಿಗೆ ಒಂದು ಮೊಬೈಲ್ ಕೊಡಿಸಲು ಆಗಿಲ್ಲ ಎಂದು ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ನಾಂದೇಡ್ ಜಿಲ್ಲೆಯ ಬಿಳೋಳಿ ತಾಲ್ಲೂಕಿನ ಮಿನಾಕಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು 16 ವರ್ಷದ ಬಾಲಕ ಓಂಕಾರ್ ಹಾಗೂ ಆತನ ತಂದೆ ರಾಜು (46) ಎಂದು ಗುರುತಿಸಲಾಗಿದೆ. ರಾಜು ಅವರಿಗೆ ಮೂವರು ಮಕ್ಕಳು. ಕೊನೆಯ ಮಗ ಓಂಕಾರ್ ಹಾಸ್ಟೆಲ್ ಒಂದರಲ್ಲಿ ಇದ್ದುಕೊಂಡು 10 ನೇ ತರಗತಿ ಓದುತ್ತಿದ್ದ. ಮಕರ ಸಂಕ್ರಮಣದ ರಜೆಗೆ ಮನೆಗೆ ಬಂದಿದ್ದ.

Leave a Reply

Your email address will not be published. Required fields are marked *

error: Content is protected !!