ಭತ್ತದ ಹೊಟ್ಟು ತುಂಬಿದ್ದ ಲಾರಿ ಪಲ್ಟಿ
ರಾಯಚೂರು: ನಗರದ ಹೊರವಲಯದ ಯರಮರಸ್ ಬೈಪಾಸ್ ಬಳಿ ಭತ್ತದ ಹೊಟ್ಟು ತುಂಬಿದ್ದ ಲಾರಿ ಚೈನೀಸ್ ಫಾಸ್ಟ್ ಫುಡ್ ಸೆಂಟರ್ ಹಾಗೂ ಹೋಟೆಲ್ ಮೇಲೆ ಉರುಳಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಜಖಂ ಆಗಿವೆ.
ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದ್ದು ಸ್ಥಳದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓವರ್ ಲೋಡ್ ತುಂಬಿಕೊಂಡು ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.




