ಚಿಕ್ಕಮಗಳೂರು: ಶರಣಾಗತ ನಕ್ಸಲರ ಶಸ್ತ್ರಾಸ್ತ್ರ, ಮದ್ದು ಗುಂಡು ವಶಪಡಿಸಿಕೊಂಡ ಪೊಲೀಸರು
ಚಿಕ್ಕಮಗಳೂರು: ಆರು ಜನ ನಕ್ಸಲರು ಶರಣಾಗತಿ ಆದ ಬೆನ್ನಲ್ಲೇ ಪೊಲೀಸರು ಶಸ್ತ್ರಾಸ್ತ್ರ, ಮದ್ದು ಗುಂಡು ವಶಪಡಿಸಿಕೊಂಡಿದ್ದಾರೆ.
ಕೊಪ್ಪ ತಾಲೂಕು ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತಲೆಗುಳಿ ಕುಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ವಶಪಡಿಸಿಕೊಳ್ಳಲಾಗಿದೆ.
ಎಕೆ 56, 303 ರೈಫಲ್, ಸ್ವದೇಶೀ ನಿರ್ಮಿತ ಪಿಸ್ತೂಲ್ ಸೇರಿದಂತೆ ಒಟ್ಟು ಶಸ್ತ್ರಾಸ್ತ್ರಗಳು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅದರಂತೆ 7.62 ಎಂಎಂ ಎಕೆ ಮದ್ದುಗುಂಡು, 303 ರೈಫಲ್ ಮದ್ದುಗುಂಡು, ಬೋರ್ ಕರ‍್ಟ್ರಿಜ್ಗಳು, ಸ್ವದೇಶಿ ನಿರ್ಮಿತ ಪಿಸ್ತೂಲ್ ಮದ್ದುಗುಂಡುಗಳು ಸೇರಿದಂತೆ ಒಟ್ಟು 176 ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.




