March 18, 2026

ಪುತ್ತೂರು: ಮನೆಯಿಂದ ಚಿನ್ನಾಭರಣ ಕಳವುಗೈದ ಆರೋಪಿಯ ಬಂಧನ: ಆರೋಪಿ ವಿರುದ್ಧ ವಿಟ್ಲ, ಪುತ್ತೂರು , ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣ ಬೆಳಕಿಗೆ

0
IMG-20250111-WA0000.jpg

ಪುತ್ತೂರು: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿ ದಿನಾಂಕ 20.12.2024 ರಂದು ಮನೆಯವರು ಇಲ್ಲದೇ ಇರುವ ಸಮಯದಲ್ಲಿ ಮನೆಯ ಹಿಂಬಾಗಿಲನ್ನು ಕಾಲಿನಿಂದ ಒದ್ದು ಬಾಗಿಲು ಮುರಿದು ಮನೆಯ ಒಳಗಿದ್ದ ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಖಲಾಗಿದ್ದು, ಈ ಕಳ್ಳತನ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವು ಕಡೆ ಆಗುತ್ತಿದ್ದು, ಜಿಲ್ಲಾ, ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಜಂಟಿ ಕಾರ್ಯಾಚರಣೆ ನಡೆಸಿ ಹಗಲು ಮನೆ ಕಳ್ಳತನ ನಡೆಸಿ ಯಾವುದೇ ಸುಳಿವು ನೀಡದೇ ಪರಾರಿಯಾಗುತ್ತಿದ್ದ ಆರೋಪಿಯನ್ನು ಅಪರಾಧ ಪತ್ತೆ ತಂಡ ದಿನಾಂಕ 10.01.2025 ರಂದು ಕಳ್ಳತನಕ್ಕೆ ಉಪಯೋಗಿಸುತ್ತಿದ್ದ ಕಾರು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ವಿಚಾರಿಸಲಾಗಿ ಈತನು ಪುತ್ತೂರು ಗ್ರಾಮಾಂತರ ಠಾಣಾ ಸರಹದ್ದಿನ ಸರ್ವೆ ಗ್ರಾಮದ ಭಕ್ತಕೋಡಿ ಹಾಗೂ ಈ ಹಿಂದೆ ಕಡಬ ಠಾಣಾ ವ್ಯಾಪ್ತಿಯ ಆಲಂಗಾರು ಗ್ರಾಮದ ಕಲ್ಲೇರಿ, ಬಂಟ್ವಾಳ ಗ್ರಾಮಾಂತರ ವ್ಯಾಪ್ತಿಯ ಇರಾ ಹಾಗೂ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಂಟು ಕುಡೇಲು, ಮಂಕುಡೆ, ಕಾಡುಮಠ, ಇಡ್ಕಿದು ಗ್ರಾಮದ ಅಳಕೆ ಮಜಲು ಎಂಬಲ್ಲಿ ಹಗಲು ಸಮಯ ಕಳವು ಮಾಡಿದ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿರುತ್ತದೆ.

ಇದೊಂದು ವಿಶೇಷ ಪ್ರಕರಣ ಆಗಿದ್ದು ಆರೋಪಿಯು ಕಳ್ಳತನ ಮಾಡಿ ಯಾವುದೇ ಸುಳಿವು ಸಿಗದೆ ಪರಾರಿಯಾಗುತ್ತಿದ್ದು ಈ ಬಗ್ಗೆ, ವಿಶೇಷ ತಂಡ ರಚಿಸಿ ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ಬಂಧಿತ ಆರೋಪಿಗಳ ವಿವರ : -ಸೂರಜ್ ಕೆ.ಪ್ರಾಯ 36 ವರ್ಷ ತಂದೆ ದಿ| ಕುಮಾರ ಪಿ ವಾಸ ಗುಡ್ಡೆ ಮನೆ ಮನೆ ಭಗವತಿ ದೇವಸ್ಥಾನ ಹತ್ತಿರ ಮನೆ ಉಪ್ಪಳ ಕಾಸರಗೋಡು ಜಿಲೆ ಕೇರಳ ರಾಜ್ಯ (ಹಾಲಿ ವಾಸ- ನವಿಲು ಗಿರಿ ಮನೆ ಮೂಡಂಬೈಲು ಗ್ರಾಮ ಹೊಸಂಗಡಿ ಮಂಜೇಶ್ವರ ಕಾಸರಗೋಡು ಜಿಲ್ಲೆ ಕೇರಳ ರಾಜ್ಯ )

ಪ್ರಕರಣಗಳಿಗೆ ಸಂಬಂದಿಸಿದಂತೆ ತನಿಖೆ ನಡೆಸಿ ಆರೋಪಿಯು ಕಳ್ಳತನ ಮಾಡಿದ್ದ ಒಟ್ಟು ಅಂದಾಜು ಮೌಲ್ಯ 18,00.000/-ರೂ (ಹದಿನೆಂಟು ಲಕ್ಷ ರೂ) ಮೌಲ್ಯದ 200ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ KL- 14X-1915 ನಂಬ್ರದ ಮಾರುತಿ ಆ ಕಾರು ಅಂದಾಜು ಮೌಲ್ಯ 3,00,000/- ರೂ (3 ಲಕ್ಷ) ಆಗಿರುತ್ತದೆ. ಸ್ವಾಧಿನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ, ರೂ 21,00,000/- ರೂ( 21 ಲಕ್ಷ ) ಆಗಿರುತ್ತದೆ.

ಸದ್ರಿ ಆರೋಪಿ ಪತ್ತೆ ಬಗ್ಗೆ ಕಾರ್ಯಾಚರಣೆಯನ್ನು ದ.ಕ ಜಿಲ್ಲೆ ಅಧೀಕ್ಷಕರಾದ ಮಾನ್ಯ ಶ್ರೀ ಯತೀಶ್, ಎನ್ ಐ.ಪಿ.ಎಸ್,ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೇಂದ್ರ ಡಿ.ಎಸ್ . ರವರ ಮಾರ್ಗದರ್ಶನದಂತೆ ಪುತ್ತೂರು ಪೊಲೀಸ್ ಉಪಾಧಿಕ್ಷಕರಾದ ಶ್ರೀ ಅರುಣ್ ನಾಗೇಗೌಡ ಹಾಗೂ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಶ್ರೀ ವಿಜಯ್ ಪ್ರಸಾದ್ ರವರ ನಿರ್ದೇಶನದಂತೆ ಪುತ್ತೂರು ಗ್ರಾಮಾಂತರ ನಿರೀಕ್ಷಕರಾದ ಶ್ರೀ ರವಿ ಬಿ.ಎಸ್, ವಿಟ್ಲ ಪೊಲೀಸ್ ನಿರೀಕ್ಷಕರಾದ ನಾಗರಾಜ್ ಹೆಚ್ .ಇ.ರವರ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಜಂಬೂರಾಜ್ ಬಿ ಮಹಾಜನ್,ಮಪಿಎಸ್ ಐ ಸುಷ್ಮಾ ಜಿ ಭಂಡಾರಿ, ಎಎಸ್‌ಐ ಮುರುಗೇಶ್ ಸಿಬ್ಬಂದಿಗಳಾದ ಉದಯ ರೈ,ರಾಧಾಕೃಷ್ಣ, ಪ್ರವೀಣ್ ರೈ ಪಾಲ್ತಾಡಿ, ಸ್ಕರಿಯ, ಅದ್ರಾಮ್, ಹರೀಶ್ ಗೌಡ, ಹರಿಶ್ಚಂದ್ರ ಹರ್ಷಿತ್‌ಗೌಡ, ಚಂದ್ರಶೇಖರ್ ಗೆಜ್ಜೆಳ್ಳಿ, ಶರಣಪ್ಪ ಪಾಟೇಲ್, ಶಂಕರ ಸಂಶಿ, ಗದಿಗಪ್ಪ, ವಿವೇಕ್, ಕುಮಾರ್ ಹೆಚ್, ನಾಗೇಶ್ ಕೆ ಸಿ, ಗಣಕಯಂತ್ರ ವಿಭಾಗದ ದಿವಾಕರ್ ಸಂಪತ್ ಚಾಲಕರಾದ ಎಆರ್‌ಎಸ್‌ಐ ಯೋಗೇಶ್ ಹಾಗೂ ನಿತೇಶ್ ಕರ್ನೂರು ವಿಶೇಷ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ. ಪತ್ತೆ ತಂಡಕ್ಕೆ ಪೊಲೀಸ್ ಅಧೀಕ್ಷಕರು ವಿಶೇಷ ಬಹುಮಾನ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!