ತಲಪಾಡಿ ಟೋಲ್ ಗೇಟ್ ಇಬ್ಬಗೆಯ ನೀತಿ ಖಂಡಿಸಿ ಬೃಹತ್ ಪ್ರತಿಭಟನೆ

ಮಂಜೇಶ್ವರ: ಇಲ್ಲಿನ ತಲಪಾಡಿ
ತಲಪಾಡಿ ಟೋಲ್ ಗೇಟ್ ನ ಅಧಿಕಾರಿಗಳ ಇಬ್ಬಗೆಯ ನೀತಿಯನ್ನು ಕೊನೆಗೊಳಿಸಬೇಕು, ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಎಲ್ಲರಿಗೂ ಟೋಲ್ ಗೇಟ್ ನಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನಿಟ್ಟು ಬೃಹತ್ ಪ್ರತಿಭಟನೆ ನಡೆಯಿತು.
ತಲಪಾಡಿ ಟೋಲ್ ಆರಂಭದ ದಿನಗಳಲ್ಲಿ ಕೇರಳ ಹಾಗೂ ಕರ್ನಾಟಕ ರಾಜ್ಯದ 5 KM ವ್ಯಾಪ್ತಿಯ ನಿವಾಸಿಯ ಯಾತ್ರಿಕರಿಗೆ ಟೋಲ್ ಗೇಟ್ ನಲ್ಲಿ ಉಚಿತ ಸಂಚಾರವನ್ನು ಕಲ್ಪಿಸಲಾಗಿತ್ತು. ಕ್ರಮೇಣ ಇದು ಕರ್ನಾಟಕದ ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ಥಳೀಯರಿಗೆ ಉಚಿತ ಸಂಚಾರ ನೀಡಿ ಮಂಜೇಶ್ವರ ದ ಸ್ಥಳೀಯರಿಗೆ ನೀಡಲಾಗುತ್ತಿದ ಉಚಿತ ಸಂಚಾರವನ್ನು ನಿಲ್ಲಿಸಲಾಗಿತ್ತು.
ಅಧಿಕಾರಿಗಳ ತಾರತಮ್ಯದ ನಿಲುವಿನ ವಿರುದ್ಧ ತಲಪಾಡಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಎಲ್ಲರಿಗೂ ಟೋಲ್ ಗೇಟ್ ನಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯನ್ನಿಟ್ಟು ವಿವಿಧ ರಾಜಕೀಯ ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ತಲಪಾಡಿ ಟೋಲ್ ಗೇಟ್ ಸಮೀಪ ಬೃಹತ್ ಪ್ರತಿಭಟನೆ ನಡೆಯಿತು