ಅನಿಲಕಟ್ಟೆ, ಶಾಲೆಯಲ್ಲಿ ಪ್ರತಿಭೋತ್ಸವ: ಸನ್ಮಾನ ಕಾರ್ಯಕ್ರಮ

ವಿಟ್ಲ: ಅನಿಲಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭೋತ್ಸವ ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷ ನವೀನ್ ಖಂಡಿಗ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಹಿರಿಯ ನ್ಯಾಯವಾದಿ ರಾಮಣ್ಣ ಗೌಡ ದೇವರಮನೆ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ ಈಶ್ವರ ಭಟ್ ಪೂರ್ಲಪ್ಪಾಡಿ, ನಿವೃತ್ತ ಪೊಲೀಸ್ ಅಧಿಕಾರಿ ದಯಾನಂದ ಗೌಡ, ನ್ಯಾಯವಾದಿ ವಿಶ್ವನಾಥ ಗೌಡ ದೇವರ ಮನೆ, ವಿಟ್ಲ ಅರಮನೆಯ ರವಿವರ್ಮ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ ವೇದಿಕೆಯಲ್ಲಿದ್ದರು.
ಈ ಸಂದರ್ಭ ಶಾಲೆಯಲ್ಲಿ ನಡೆಯುವ ಸ್ವಾತಂತ್ರೋತ್ಸವದ ಕಾರ್ಯಕ್ರಮ ಗಳಿಗೆ ಕಳೆದ ಕೆಲವು ವರ್ಷಗಳಿಂದ ಅನ್ನದಾನ ನೀಡುತ್ತಿರುವ ಚಿದಾನಂದ ಸೊರಂಗದಮೂಲೆ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿ ಸೌಮ್ಯಲತಾ ಸ್ವಾಗತಿಸಿ ನಿರೂಪಿಸಿದರು.
ಶಿಕ್ಷಕಿಯರಾದ ಧನ್ಯಶ್ರೀ, ಕುಮಾರಿ ಪ್ರೇಮ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.