ಮರದ ದಿಮ್ಮಿಗೆ ಢಿಕ್ಕಿ ಹೊಡೆದ ಮಲ್ಪೆ ಬಂದರಿನ ಮೀನುಗಾರಿಕಾ ದೋಣಿ: ಮುಳುಗಡೆಯಾಗಿ 65 ಲಕ್ಷ ರೂ. ನಷ್ಟ

ಗಂಗೊಳ್ಳಿ: ದುರಸ್ತಿಗೆಂದು ಹೋಗಿದ್ದ ಮಲ್ಪೆ ಬಂದರಿನ ಮೀನುಗಾರಿಕಾ ದೋಣಿಗೆ ಗಂಗೊಳ್ಳಿ ಅಳಿವೆ ಸಮೀಪ ಮರದ ದಿಮ್ಮಿ ಜನವರಿ 4ರಂದು ಡಿಕ್ಕಿ ಹೊಡೆದು ಭಾಗಶಃ ಮುಳುಗಡೆಯಾಗಿ 65 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ.
ಸಂಜಾತ ಅವರ ಒಡೆತನದ ತವಕಲ್ ಎಂಬ ಹೆಸರಿನ ಮೀನುಗಾರಿಕೆ ದೋಣಿಯನ್ನು ಜ. 4ರಂದು ಸಂಜೆ 5.30ಕ್ಕೆ ಮೀನುಗಾರರಾದ ರವಿ ಸಾಲ್ಯಾನ್ ಮತ್ತು ಹರೀಶ್ ಅವರು ಮಲ್ಪೆ ಬಂದರಿನಿಂದ ಗಂಗೊಳ್ಳಿಗೆ ದುರಸ್ತಿಗಾಗಿ ಮೀನುಗಾರರಾದ ರವಿ ಸಾಲಿಯಾನ್ ಮತ್ತು ಹರೀಶ್ ಎಂಬುವರು ತೆಗೆದುಕೊಂಡು ಹೋಗುತ್ತಿದ್ದರು.