ಆಟವಾಡುತ್ತಿದ್ದಾಗ ನೀರಿನ ಮೋಟರ್ ಪಂಪ್ ಮುಟ್ಟಿದಾಗ ವಿದ್ಯುತ್ ಶಾಕ್: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು

ದಾವಣಗೆರೆ: ವಿದ್ಯುತ್ ಶಾಕ್ ಹೊಡೆದು ಒಂದೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಹೊನ್ನಾಳಿಯ ಸೊರಟೂರು ಗ್ರಾಮದಲ್ಲಿ ನಡೆದಿದೆ.
ಮೃತ ಮಗುವನ್ನು ಗ್ರಾಮದ ಆಂಜನೇಯ ಎಂಬುವರ ಪುತ್ರ ಮಂಜು ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ಮನೆಯಲ್ಲಿ ಮೋಟರ್ ಆನ್ ಮಾಡಿ ನೀರು ತುಂಬಿಸುವಾಗ ಈ ಘಟನೆ ನಡೆದಿದೆ. ಆಟವಾಡುತ್ತಿದ್ದಾಗ ಮಗು ನೀರಿನ ಮೋಟರ್ ಹಿಡಿದುಕೊಂಡಿದೆ. ಇದರಿಂದ ಮಗುವಿಗೆ ವಿದ್ಯತ್ ಶಾಕ್ ಹೊಡೆದಿದ್ದು, ಮಗು ಸ್ಥಳದಲ್ಲೇ ಸಾವಿಗೀಡಾಗಿದೆ.