March 18, 2026

ಕುಶಾಲನಗರ: ಮಸೀದಿಯಲ್ಲಿ ಕಳವು, ಸೊತ್ತುಗಳ ಸಹಿತ ಆರೋಪಿಯ ಬಂಧನ

0
image_editor_output_image-372944925-1736230560871.jpg

ಕುಶಾಲನಗರ : ಕುಶಾಲನಗರದ ಇಂದಿರಾ ಬಡಾವಣೆಯಲ್ಲಿರುವ ಮಸೀದಿಯಲ್ಲಿ ಕಳ್ಳತನ ನಡೆಸಿದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿರಾಜಪೇಟೆ ನಗರದ ಸುಣ್ಣದ ಬೀದಿಯ ನಿವಾಸಿ ಮಹಮ್ಮದ್ ಶೋಯಭ್ (32) ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಹಾಗೂ ಸದರಿ ಪ್ರಕರಣದಲ್ಲಿ ಕಳ್ಳತನವಾಗಿದ್ದ ಧ್ವನಿ ವರ್ಧಕಕ್ಕೆ ಅಳವಡಿಸುವ ಒಂದು ಆಂಪ್ಲಿಫೈ‌ರ್ ಮತ್ತು ಅದರ ಸಲಕರಣೆಗಳು ಹಾಗೂ ರೂ. 3000 ನಗದನ್ನು ವಶಪಡಿಕೊಳ್ಳಲಾಗಿದೆ.

ಕುಶಾಲನಗರ ಟೌನ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024ರ ಡಿ.19 ರಂದು ಇಂದಿರಾ ಬಡಾವಣೆಯಲ್ಲಿರುವ ಮಸೀದಿಯ ಒಳಗೆ ಇಟ್ಟಿದ್ದ ಕಾಣಿಕೆ ಹುಂಡಿಯನ್ನು ಮತ್ತು ಮಸೀದಿಯ ಧ್ವನಿ ವರ್ಧಕಕ್ಕೆ ಅಳವಡಿಸುವ ಆಂಪ್ಲಿಫೈರ್ ಹಾಗೂ ಅದರ ಉಪಕರಣವನ್ನು ಕಳ್ಳತನವಾಗಿರುವ ಕುರಿತು ದೂರು ಸ್ವೀಕರಿಸಲಾಗಿತ್ತು. ಕುಶಾಲನಗರ ಟೌನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಧಿಕಾರಿ ಹಾಗೂ ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಆರೋಪಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!