February 4, 2026

ಮಹಾತ್ಮ ಗಾಂಧಿ ಭಾರತದ ರಾಷ್ಟ್ರಪಿತ ಅಲ್ಲ: ಮೀನಾಕ್ಷಿ

0
image_editor_output_image-474324352-1736161610531.jpg

ಉಡುಪಿ: ‘ಮಹಾತ್ಮ ಗಾಂಧಿ ಅವರನ್ನು ಭಾರತದ ರಾಷ್ಟ್ರಪಿತ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಗಾಂಧಿ ಹುಟ್ಟುವ ಮೊದಲೇ ಭಾರತ ಇತ್ತು. ಭಾರತದಲ್ಲಿ ಹುಟ್ಟಿದ ಗಾಂಧಿ ರಾಷ್ಟ್ರಕ್ಕೆ ತಂದೆಯಾಗಲು ಸಾಧ್ಯವಿಲ್ಲ’ ಎಂದು ಚಿಂತಕಿ ಡೆಹ್ರಾಡೂನ್‌ನ ಮೀನಾಕ್ಷಿ ಸೆಹರಾವತ್ ಪ್ರತಿಪಾದಿಸಿದರು.

ಅದಮಾರು ಮಠದ ಆಶ್ರಯದ ಶ್ರೀಕೃಷ್ಣ ಸೇವಾ ಬಳಗದ ನೇತೃತ್ವದಲ್ಲಿ ವಿಶ್ವಾರ್ಪಣಂ ಕಾರ್ಯಕ್ರಮದ ಅಂಗವಾಗಿ ಶನಿವಾರ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಹಮ್ಮಿಕೊಮಡಿದ್ದ ಪಲಿಮಾರು ಮಠದ ಹಿರಿಯ ಯತಿ ವಿದ್ಯಾಧೀಶತೀರ್ಥ ಶ್ರೀಪಾದರ ಅಭಿನಂದನೆ ಕಾರ್ಯಕ್ರಮದಲ್ಲಿ ‘ಬಾಂಗ್ಲಾ-ಪಾಠ’ ವಿಷಯದ ಕುರಿತು ಅವರು ಮಾತನಾಡಿದರು.

‘ಜಿನ್ನಾನ ಜೊತೆ ಸೇರಿ ಗಾಂಧಿ ಅವರು ಪಾಕಿಸ್ತಾನವನ್ನು ಹುಟ್ಟುಹಾಕಿದ್ದಾರೆ. ಆ ಕಾರಣಕ್ಕೆ ಅವರನ್ನು ಪಾಕಿಸ್ತಾನದ ಪಿತ ಎನ್ನಬಹುದು’ ಎಂದರು.

‘ಭಾರತ ದೇಶಕ್ಕೆ ಯಾರೂ ಪಿತರಿಲ್ಲ. ಭಾರತವು ನಮ್ಮ ಮಾತೆ. ಗಾಂಧಿ ಅವರು ಅಹಿಂಸೆಯ ಪಾಠ ಮಾಡಿದ್ದಾರೆ. 20 ಲಕ್ಷ ಹಿಂದೂಗಳ ಹತ್ಯೆಯಾದಾಗ ಅವರ ಅಹಿಂಸೆ ಪಾಠ ನಿಂತು ಹೋಯಿತು. ಈ ಅಹಿಂಸೆಯ ಪಾಠದಿಂದಾಗಿಯೇ ನಮ್ಮ ದೇಶದ ಯುವಜನರು ನಪುಂಸಕರಂತಾಗಿದ್ದಾರೆ’ ಎಂದು ಹೇಳಿದರು.

Leave a Reply

Your email address will not be published. Required fields are marked *

You may have missed

error: Content is protected !!