December 16, 2025

ಮಣಿಪಾಲ: ಬೈಕ್‌ನಲ್ಲಿ ಅಪಾಯಕಾರಿ ವೀಲಿಂಗ್‌ ಮಾಡುತ್ತಿದ್ದ ವ್ಯಕ್ತಿಯ ಬಂಧನ

0
image_editor_output_image1231735899-1736145025583.jpg

ಮಣಿಪಾಲದ ರಜತಾದ್ರಿ ರಸ್ತೆಯಲ್ಲಿ ಬೈಕ್‌ನಲ್ಲಿ ಅಪಾಯಕಾರಿ ರೀತಿಯಲ್ಲಿ ವೀಲಿಂಗ್‌ ಮಾಡುತ್ತಿದ್ದ ವ್ಯಕ್ತಿಯ ಬಂಧಿಸಲಾಗಿದೆ.

ದಿನಾಂಕ: 04-01-2025 ರಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ಹರಿದಾಡಿದ್ದು ಅದರಲ್ಲಿ ಒಬ್ಬ ವ್ಯಕ್ತಿ ಬೈಕ್‌ ನಲ್ಲಿ ಹಿಂಬದಿಯಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಕುರಿಸಿಕೊಂಡು ಮಣಿಪಾಲದ NH 169(a) ಹಾಗೂ ರಜತಾದ್ರಿ ರಸ್ತೆಗಳಲ್ಲಿ ಮಾನವ ಜೀವಕ್ಕೆ ಮರಣವನ್ನುಂಟುಮಾಡುವ ರೀತಿಯಲ್ಲಿ ಅಪಾಯಕಾರಿಯಾಗಿ ವಾಹನವನ್ನು ಚಲಾಯಿಸಿದಲ್ಲದೇ ಚಾಲನೆ ಮಾಡಿದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ದೃಶ್ಯಾವಳಿಗಳು ವೈರಲ್‌ ಆಗಿದ್ದು, ಈ ಬಗ್ಗೆ ಮಣಿಪಾಲ ಠಾಣಾ ಪಿ.ಐ ದೇವರಾಜ್‌ ಟಿ.ವಿ ನೇತೃತ್ವದಪೊಲೀಸ್‌ ಉಪ ನಿರೀಕ್ಷಕರಾದ ಅನೀಲ್‌, ಅಕ್ಷಯ ಕುಮಾರಿ, ಸಿಬ್ಬಂದಿಗಳಾದ ವಿವೇಕ್‌, ಪ್ರಸನ್ನ, ಇಮ್ರಾನ್‌, ಸುರೇಶ್‌ ಶೆಟ್ಟಿ ಹಾಗೂ ಸುಕುಮಾರ್‌ ಶೆಟ್ಟಿ ರುದ್ರವ್ವರವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಮಹಮ್ಮದ್‌ ಆಶಿಕ್(19) ಆತ್ರಾಡಿ ಗ್ರಾಮ ಈತನನ್ನು ದಸ್ತಗಿರಿ ಮಾಡಿ ವೀಲಿಂಗ್‌ ಮಾಡಲು ಬಳಿಸಿದ ಸ್ಕೂಟರ್‌ KA.20.HC 6899 (TVS Access 125) ವಶಪಡಿಸಿಕೊಂಡು ಆರೋಪಿ ವಿರುದ್ದ ಮಣಿಪಾಲ ಠಾಣೆ ಪ್ರಕರಣ ಸಂಖ್ಯೆ 03/2025 ಕಲಂ: 281,110 BNS Act 2023 ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!