January 31, 2026

ಕಾಸರಗೋಡು: ಸರಕಾರಿ ಉದ್ಯೋಗ ಕೊಡಿಸುವುದಾಗಿ ವಂಚನೆ ಪ್ರಕರಣ: ಸಚಿತಾ ರೈ ವಿರುದ್ಧ 20 ಪ್ರಕರಣ ದಾಖಲು

0
image_editor_output_image-2016703169-1736067377864

ಕಾಸರಗೋಡು: ಕೇಂದ್ರ-ರಾಜ್ಯ ಸರಕಾರಗಳ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸುವುದಾಗಿ ನಂಬಿಸಿ ಹಲವರಿಂದ ಲಕ್ಷಾಂತರ ರೂ. ವಂಚಿಸಿದ ಪ್ರಕರಣದ ಆರೋಪಿ ಮಾಜಿ ಡಿವೈಎಫ್‌ಐ ಮುಖಂಡೆ, ಅಧ್ಯಾಪಕಿಯಾಗಿರುವ ಪುತ್ತಿಗೆ ಬಾಡೂರಿನ ಸಚಿತಾ ರೈ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದ್ದು, ಈ ಮೂಲಕ ಸಚಿತಾ ರೈ ವಿರುದ್ಧ ದಾಖಲಾದ ಕೇಸುಗಳ ಸಂಖ್ಯೆ 20 ಕ್ಕೇರಿದೆ.

ಬಾಯಾರು ಧರ್ಮತ್ತಡ್ಕ ಕರುವಾಜೆಯ ಮರಿಯಮ್ಮತ್ ಸಪೂರ ನೀಡಿದ ದೂರಿನಂತೆ ಸಚಿತಾ ರೈ ವಿರುದ್ದ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಸರಗೋಡು ಕೇಂದ್ರೀಯ ವಿದ್ಯಾಲಯದಲ್ಲಿ ಸೀನಿಯರ್ ಕ್ಲಾರ್ಕ್ ಉದ್ಯೋಗ ಭರವಸೆ ನೀಡಿ 13,80,000 ರೂ. ವಂಚಿಸಿದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿದೆ. 2023 ಡಿ.13 ರಿಂದ 2024 ಎಪ್ರಿಲ್ 30 ರ ವರೆಗಿನ ಕಾಲಾವಧಿಯಲ್ಲಿ ಹಣ ನೀಡಿರುವುದಾಗಿ ದೂರದಾರರು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!