ಬಂಟ್ವಾಳ: ಜ.12 ರಂದು SSF, SYS, KMJ ಬಾರೆಬೆಟ್ಟು UNIT CONFERENCE ಮತ್ತು ಮಹ್ಳರತುಲ್ ಬದ್ರಿಯ ವಾರ್ಷಿಕ ಕಾರ್ಯಕ್ರಮ

ವಿಟ್ಲ: SSF, SYS, KMJ ಬಾರೆಬೆಟ್ಟು ಇದರ ಯೂನಿಟ್ ಕಾನ್ಫರೆನ್ಸ್ ಮತ್ತು ಮಹ್ಳರತುಲ್ ಬದ್ರಿಯಾ ವಾರ್ಷಿಕ ಕಾರ್ಯಕ್ರಮವು ಜ 12 ರಂದು ಮಗ್ರಿಬ್ ನಮಾಜಿನ ಬಳಿಕ ಬಾರೆಬೆಟ್ಟು ಮಸ್ಜಿದ್ ಸಮೀಪ ದ ಗ್ರೌಂಡ್ ನಲ್ಲಿ ನಡೆಯಲಿದೆ.
ಮಹ್ಳರತುಲ್ ಬದ್ರಿಯ ವಾರ್ಷಿಕ ಕಾರ್ಯಕ್ರಮಕ್ಕೆ ಸಯ್ಯಿದ್ ಶಿಹಾಬದ್ದೀನ್ ತಂಗಳ್ ನೇತ್ರತ್ವ ನೀಡಲಿದ್ದಾರೆ. ನಂತರ ನಡೆಯಲಿರುವ KMJ, SYS, SSF ಯೂನಿಟ್ ಕಾನ್ಫರೆನ್ಸನ ಅಧ್ಯಕ್ಷತೆನ್ನು ಸ್ವಾಗತ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಸಾಮ್ರಾಟ್ ವಹಿಸಲಿದ್ದಾರೆ.
ಪ್ರಖ್ಯಾತ ವಾಗ್ಮಿ ರಾಶಿದ್ ಬುಖಾರಿ ಕುಟ್ಯಾಡಿ ಮುಖ್ಯಪ್ರಭಾಷಣ ಮಾಡಲಿದ್ದಾರೆ. ದಾರುಲ್ ಅಶ್ಅರಿಯ ಮ್ಯನೇಜರ್ ಮುಹಮ್ಮದಲಿ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಸಮಾರೋಪ ದುಆ ಕಾರ್ರ್ಯಕ್ರಮಕ್ಕೆ ಮುಸ್ತಾಕುರ್ರಹ್ಮಾನ್ ತಂಙಳ್ ಚಟ್ಟಕಲ್ ನೇತ್ರತ್ವ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಶಮೀಮ್ ಬುಖಾರಿ ಅಲ್ ಅಹ್ಸನಿ ಮುದರ್ರಿಸ್ ದಾರುನ್ನಜಾತ್ ಟಿಪ್ಪುನಗರ, ಬಾರೆಬೆಟ್ಟು ಖತೀಬ್ ರಝಾಕ್ ಮದನಿ ಖಾದರ್ ಫೈಝಿ ಪಾಟ್ರಕೋಡಿ, ಹಸೈನಾರ್ ಮುಸ್ಲಿಯಾರ್ ಬಾರೆಬೆಟ್ಟು ಸಮೇತ ಹಲವಾರು ಉಲಮಾ ಉಮರಾ ನಾಯಕರು ಬಾಗವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಸ್ವಾಗತ ಸಮಿತಿ ಕನ್ವೀನರ್ ಶರೀಫ್ ಸಅದಿ ಕರೆ ನೀಡಿದ್ದಾರೆ.