ಅಂಗನವಾಡಿಗೆ ಹೋಗುತ್ತಿದ್ದಾಗ ಹಾವು ಕಚ್ಚಿ ಬಾಲಕಿ ಸಾವು
ಮುಂಡಗೋಡ: ಹಾವು ಕಡಿದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಡಿ.31ರ ಮಂಗಳವಾರ ನಡೆದಿದೆ.
ಪಟ್ಟಣದ ಅಂಗನವಾಡಿಯ ಮಯೂರಿ ಸುರೇಶ ಕುಂಬಳೆಪ್ಪನವರ (5) ಹಾವು ಕಡಿದು ಮೃತಪಟ್ಟ ಬಾಲಕಿ. ಮಯೂರಿ ಎಂದಿನಂತೆ ಅಂಗನವಾಡಿಗೆ ಹೋಗಿದ್ದ ವೇಳೆ ಮೂತ್ರ ವಿಸರ್ಜನೆಗೆಂದು ಅಂಗನವಾಡಿಯ ಹಿಂಬದಿಯಲ್ಲಿ ತೆರಳಿದಾಗ ಯಾವುದೋ ಹಾವು ಕಡಿದಿದೆ.
ಬಾಲಕಿ ತಕ್ಷಣ, ಕಾಲಿಗೆ ಹಾವು ಕಡಿತು ಎಂದು ಅಳುತ್ತಾ ಓಡಿ ಬಂದಿದ್ದಾಳೆ. ಈ ವೇಳೆ ಅಲ್ಲೆ ಇದ್ದ ಸ್ಥಳೀಯರು ವಿಷ ಏರದಂತೆ ಸೆಣಬು ಕಟ್ಟಿಕೊಂಡು ಆಟೋದಲ್ಲಿ ಕೂಡಲೇ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.





