ಉಳ್ಳಾಲ: ಲಾರಿ ಅಪಘಾತದಲ್ಲಿ ಸ್ಕೂಟರ್ ಸವಾರ, ಸ್ವಿಗ್ಗಿ ಡೆಲಿವರಿ ಬಾಯ್ ಸಾವು

ಉಳ್ಳಾಲ: ಲಾರಿ ಅಪಘಾತದಲ್ಲಿ ಸ್ಕೂಟರ್ ಸವಾರ, ಸ್ವಿಗ್ಗಿ ಡೆಲಿವರಿ ಬಾಯ್ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾ.ಹೆ.66 ರ ಸಂಕೊಳಿಗೆ ಸಮೀಪ ಡಿ.31ರ ಮಂಗಳವಾರ ಸಂಭವಿಸಿದೆ.
ದೇರಳಕಟ್ಟೆ ಪಾನೀರು ನಿವಾಸಿ ಉಮ್ಮರ್ ಫಾರುಕ್ ಯಾನೆ ಅಝರ್ (31) ಸಾವನ್ನಪ್ಪಿದವರು.
ಅವಿವಾಹಿತರಾಗಿರುವ ಇವರು ಸ್ವಿಗ್ಗಿ ಡೆಲಿವರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಡಿ.31ರ ತಡರಾತ್ರಿ ತಲಪಾಡಿಯಿಂದ ಡೆಲಿವರಿ ತಲುಪಿಸಿ ತೊಕ್ಕೊಟ್ಟು ಕಡೆಗೆ ವಾಪಸ್ಸಾಗುವ ಸಂದರ್ಭ ಅದೇ ದಾರಿಯಲ್ಲಿ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದು ರಸ್ತೆಗೆ ಎಸೆಯಲ್ಪಟ್ಟಿದ್ದರು. ಬಳಿಕ ಅದೇ ಲಾರಿಯ ಹಿಂಬದಿ ಚಕ್ರಗಳು ಅವರ ಮೇಲೆ ಚಲಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.