ವಿಟ್ಲ: ಹೊರೈಝನ್ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆ

ವಿಟ್ಲ: ಹೊರೈಝನ್ ಪಬ್ಲಿಕ್ ಸ್ಕೂಲ್ ನ ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳ ಛಧ್ಮವೇಷ ಸ್ಪರ್ಧೆಯು ಶಾಲೆಯ ಅಧ್ಯಕ್ಷ ಅಝೀಝ್ ಸನ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಪೋಷಕರಿಗೆ ಮಕ್ಕಳ ಯಶಸ್ವಿಯಲ್ಲಿ ಹೆತ್ತವರ ಪಾತ್ರ ಎಂಬ ವಿಷಯದ ಬಗ್ಗೆ ತರಬೇತಿ ಶಿಬಿರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ರಫೀಕ್ ಮಾಸ್ಟರ್ ಆತೂರು ಭಾಗವಹಿಸಿದ್ದರು.
ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಕೋಶಾಧಿಕಾರಿ ಶರೀಫ್ ಪೊನ್ನೋಟು, ಶಾಲೆಯ ಉಪಾಧ್ಯಕ್ಷ ವಿ.ಕೆ.ಎಂ. ಅಶ್ರಫ್, ಕಾರ್ಯದರ್ಶಿ ಅಬೂಬಕರ್ ನೋಟರಿ, ಜೊತೆ ಕಾರ್ಯದರ್ಶಿ ಇಕ್ಬಾಲ್ ಹಳೆಮನೆ, ಟ್ರಸ್ಟಿ ಅಬ್ದುಲ್ ಹಮೀದ್ ಬದ್ರಿಯಾ, ಮಸೀದಿಯ ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು, ಉಪ ಮುಖ್ಯ ಶಿಕ್ಷಕಿ ಗಾಯತ್ರಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶದೀದ ಸ್ವಾಗತಿಸಿದರು. ರೈಹಾನ ವಂದಿಸಿದರು. ಶದಾ ನಿರೂಪಿಸಿದರು.