March 15, 2025

ಕಾರ್ಕಳ: ಪ್ರಣವ್ ಜುವೆಲ್ಲರಿ ಕಳ್ಳತನ ಪ್ರಕರಣ: ಆರೋಪಿಯ ಬಂಧನ

0

ಕಾರ್ಕಳ: ಇಲ್ಲಿನ ಮೂರು ಮಾರ್ಗ ಬಳಿ ಪ್ರಣವ್ ಜುವೆಲರಿ ಕಳ್ಳತನ ಪ್ರಕರಣಕ್ಕೆ‌ ಸಂಬಂಧಿಸಿ ಆರೋಪಿಯನ್ನು ಕಾರ್ಕಳ ‌ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಖ್ಯಾತ ಸರಗಳ್ಳ ಧಾರವಾಡದ ಜನ್ನತ್ ನಗರದ ನಿವಾಸಿ ಮೊಹಮ್ಮದ್ ಅಲಿಖಾನ್ ಅಲಿಯಾಸ್ ಇರಾನಿ ಅವನಿ (32) ಬಂಧಿತ ಆರೋಪಿ. ಆರೋಪಿಯಿಂದ 1.78 ಲಕ್ಷ ರೂ.ಮೌಲ್ಯದ 26 ಗ್ರಾಂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಡಿವೈಎಸ್ ಪಿ ಅರವಿಂದ್ ಕಲಗುಜ್ಜಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಮಂಜಪ್ಪ ಅವರ ನೇತೃತ್ವದಲ್ಲಿ ಪಿಎಸ್ ಐಗಳಾದ ಸಂದೀಪ್ ಕುಮಾರ್ ಶೆಟ್ಟಿ, ಶಿವಕುಮಾರ್, ಸಿಬಂದಿಗಳಾದ ಗೋಪಾಲ್, ಸಂತೋಷ್, ಶ್ರೀನಿವಾಸ್, ಸದಾನಂದ್, ದರ್ಶನ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!