February 2, 2026

ವಿಟ್ಲ: ಡಿ.20 ರಂದು ಎ.ಎಂ ನೌಶಾದ್ ಬಾಖವಿ ಕೆಲಿಂಜಕ್ಕೆ

0
image_editor_output_image1585982550-1639809194574

ವಿಟ್ಲ: ಕೆಲಿಂಜ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮಸರಸ ಇದರ ಜಂಟಿ ಆಶ್ರಯದಲ್ಲಿ ಮರ್ಹೂಂ ಮಿತ್ತಬೈಲ್ ಉಸ್ತಾದರ ಅನುಸ್ಮರಣೆ ಮತ್ತು ಏಕದಿನ ಧಾರ್ಮಿಕ ಮತಪ್ರವಚನ ಡಿ. 20ರಂದು ಸೋಮವಾರ ನಡೆಯಲಿದ್ದು, ಖ್ಯಾತ ವಾಗ್ಮಿ ಎ.ಎಂ ನೌಶಾದ್ ಬಾಖವಿ ಪ್ರಭಾಷಣ ಮಾಡಲಿದ್ದಾರೆ ಎಂದು ಕೆಲಿಂಜ ಮಸೀದಿ ಖತೀಬು ಅಬ್ಬಾಸ್ ದಾರಿಮಿ ಕೆಲಿಂಜ ತಿಳಿಸಿದರು.

ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲಿಂಜ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಕರೀಂ ಕಂಪದಬೈಲು ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವಾಗ್ಮಿ ನೌಶಾದ್ ಬಾಖವಿ ತಿರುವನಂತಪುರಂ ಮುಖ್ಯ ಪ್ರಭಾಷಣ ಮಾಡಲಿದ್ದು, ಮಿತ್ತಬೈಲ್ ಇರ್ಷಾದ್ ದಾರಿಮಿ, ಶಾಸಕ ಯು.ಟಿ ಖಾದರ್, ಹಾಜಿ ಕೆಂಪಿ ಮುಸ್ತಫ, ಕೆ.ಎಸ್ ಇಸ್ಮಾಯಿಲ್ ಹಾಜಿ, ಅಬೂಬಕ್ಕರ್ ಹಾಜಿ ಗೋಳ್ತಮಜಲು ಹಾಗೂ ಹಲವಾರು ಧಾರ್ಮಿಕ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಕರೀಂ ಕಂಪದಬೈಲ್, ಮಹಮ್ಮದ್ ಇಸ್ಮಾಯಿಲ್ ಮುನ್ನಾ, ರಾಝಿಕ್ ಕೆಲಿಂಜ ಕಾರ್ಸ್ , ಮಹಮ್ಮದ್ ಅಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!