ಕಡಿಮೆ ಟಿಪ್ಸ್ ಕೊಟ್ಟಿದ್ದಕ್ಕೆ ಗರ್ಭಿಣಿಯನ್ನು ಚಾಕುವಿನಿಂದ ಇರಿದ ಪಿಜ್ಜಾ ಡೆಲಿವರಿ ಗರ್ಲ್
ನ್ಯೂಯಾರ್ಕ್: ಕೇವಲ 170 ಟಿಪ್ಸ್ ಕೊಟ್ಟರು ಎಂದು ಗರ್ಭಿಣಿಗೆ ಪಿಜ್ಜಾ ಡೆಲಿವರಿ ಕೆಲಸಗಾರ್ತಿ ಚಾಕುವಿನಿಂದ 14 ಬಾರಿ ಇರಿದಿರುವ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.
ಬ್ರಿಯಾನ್ನಾ ಅಲ್ವೆಲೊ (22) ಚಾಕುವಿನಿಂದ ಇರಿದ ಆರೋಪಿ. ಸಂತ್ರಸ್ತ ಮಹಿಳೆ ಕುಟುಂಬದವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು. ಅದಕ್ಕಾಗಿ ಪಿಜ್ಜಾ ಆರ್ಡರ್ ಮಾಡಿದ್ದರು. ಆರ್ಡರ್ ತಂದುಕೊಟ್ಟ ಆರೋಪಿಯು ಕೇವಲ 2 ಡಾಲರ್ ಕೊಟ್ಟಿದ್ದಕ್ಕೆ ಚಾಕುವಿನಿಂದ ಗರ್ಭಿಣಿ ಮೇಲೆ ಹಲ್ಲೆ ನಡೆಸಿದ್ದಾಳೆ.
ದಾಳಿಯ ಸಮಯದಲ್ಲಿ ಸಂತ್ರಸ್ತ ಮಹಿಳೆ, ಆಕೆಯ ಗೆಳೆಯ ಮತ್ತು ಆಕೆಯ 5 ವರ್ಷದ ಮಗಳು ಮೋಟೆಲ್ ಕೋಣೆಯಲ್ಲಿದ್ದರು. ಆರೋಪಿ ಅಲ್ವೆಲೊ ಪಿಜ್ಜಾ ಡೆಲಿವರಿ ಮಾಡಿದ್ದಳು. ಒಟ್ಟು ಮೊತ್ತ $33 (ಸುಮಾರು ರೂ. 2,800) ಆಗಿತ್ತು. ಡೆಲಿವರಿ ವರ್ಕರ್‌ಗೆ ಕೇವಲ $2 ಅನ್ನು ನೀಡಿದ್ದರು. ಅದನ್ನು ಪಡೆದು ಹೋಗಿದ್ದ ಆರೋಪಿ ಮತ್ತೆ 90 ನಿಮಿಷಗಳ ನಂತರ ತನ್ನ ಕೆಂಪು ಟೊಯೋಟಾದಲ್ಲಿ ಮುಸುಕುಧಾರಿ ಸಹಚರನೊಂದಿಗೆ ಹಿಂದಿರುಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾಳೆ.