March 17, 2025

ಸುಬ್ರಹ್ಮಣ್ಯ ಮಠದ ಅರ್ಚಕರ ಮನೆಯಲ್ಲಿ ಕಳ್ಳತನ

0

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಮಠದಲ್ಲಿ ಅರ್ಚಕರಾಗಿರುವ ಆನಂದ ಭಟ್ ಅವರ ಮನೆಯಲ್ಲಿ ಕಳ್ಳತನವಾಗಿದೆ.

ಸುಬ್ರಹ್ಮಣ್ಯ ಮಠದಲ್ಲಿ ಅರ್ಚಕರಾಗಿರುವ ಆನಂದ ಭಟ್ ಅವರು ಡಿ. 22ರಂದು ಬೆಳಗಿನ ಜಾವ ಎಂದಿನಂತೆ ಮಠಕ್ಕೆ ತೆರಳಿದ್ದರು. ಬಳಿಕ ಕೆಲಸ ಮುಗಿಸಿಕೊಂಡು ಬೆಳಗ್ಗೆ ಮನೆಗೆ ಬಂದಾಗ ಮನೆಯ ಮುಂಬಾಗಲಿನ ಬೀಗ ಮುರಿದಿರುವುದು ಕಂಡುಬಂದಿತ್ತು. ಮನೆಯ ಒಳಗೆ ಹೋಗಿ ನೋಡಿದಾಗ ಗಾದ್ರೇಜ್ ತೆರೆದಿದ್ದು, ಪರಿಶೀಲಿಸಿದಾಗ ಗಾದ್ರೇಜ್ ಒಳಗಡೆ ಪರ್ಸ್ನಲ್ಲಿಟ್ಟಿದ್ದ ಸುಮಾರು 25 ಸಾವಿರ ರೂ. ಹಣ ಮತ್ತು 1.15 ಲಕ್ಷ ರೂ. ಮೌಲ್ಯದ ಸುಮಾರು 23 ಗ್ರಾಂ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ.

 

 

Leave a Reply

Your email address will not be published. Required fields are marked *

error: Content is protected !!