ವಿಟ್ಲ: ಡಿ.24(ನಾಳೆ) ಅಡ್ಯನಡ್ಕದಲ್ಲಿ ಜಾಮೀಅಃ ಇರ್ಫಾನಿಯ್ಯ ಇದರ ವಾರ್ಷಿಕ ಮಹಾಸಮ್ಮೇಳನದ ಪ್ರಚಾರ ಕನ್ವೆನ್ಷನ್
ವಿಟ್ಲ: ಜಾಮಿಅಃ ಇರ್ಫಾನಿಯ್ಯ ಅರಬಿಕ್ ಕಾಲೇಜು ಚಪ್ಪಾರಪಡವು ಕಣ್ಣೂರು ಕೇರಳ ಸಂಸ್ಥೆಯ 33ನೇ ವಾರ್ಷಿಕ ಹಾಗೂ 22ನೇ ಬಿರುದು ದಾನ ಮಹಾಸಮ್ಮೇಳನವು ಜನವರಿ ಯಲ್ಲಿ ನಡೆಯಲಿದ್ದು, ಪ್ರಸ್ತುತ ಸಮ್ಮೇಳನದ ಪ್ರಚಾರಾರ್ಥ ಆತ್ಮೀಯ ಬದ್ರ್ ಮೌಲಿದ್ ಹಾಗೂ ಕಾಸರಗೋಡು ಜಿಲ್ಲಾ ಪ್ರಚಾರ ಕನ್ವೆನ್ಷನ್ ಇದೇ ಬರುವ ಡಿಸೆಂಬರ್ 24ರ ಮಂಗಳವಾರ ಕೆದಿಲ ಅಡಿಟೋರಿಯಂ ಅಡ್ಯನಡ್ಕ ದಲ್ಲಿ ನಡೆಯಲಿದೆ.
ಅಸರ್ ನಮಾಝ್ ಬಳಿಕ ಬಹು| ಉಸ್ತಾದ್ ಎಸ್.ಎಂ ಮುಹಮ್ಮದ್ ಫೈಝಿ ರವರ ದುಆದೊಂದಿಗೆ ಪ್ರಾರಂಭಗೊಂಡು ಬಹು| ಅಲ್‌ಹಾಜ್ ಅಬ್ದು ರಝ್ಝಾಕ್ ಮಿಸ್ಬಾಹಿ ಯವರ ಅಧ್ಯಕ್ಷತೆಯಲ್ಲಿ ಬಹು| ಅಸ್ಯಯ್ಯಿದ್ ಮುಹಮ್ಮದ್ ಶರೀಫ್ ತಂಙಳ್ ಇರ್ಫಾನಿ ಅಲ್ ಮಖ್ದೂಮಿ ಹಾಗೂ ಬಹು| ಉಮರ್ ಫೈಝಿ ಇರ್ಫಾನಿ ಕಣ್ಣೂರು ಇವರಿಂದ ಮತಪ್ರಭಾಷಣ ನಡೆಯಲಿದೆ.
ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶವಿದೆ. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.