March 27, 2026

ಕಾಣಿಕೆ ಹಾಕುವಾಗ ಕೈತಪ್ಪಿ ಹುಂಡಿಗೆ ಬಿದ್ದ ಐಫೋನ್: ಹುಂಡಿಗೆ ಬಿದ್ದ ವಸ್ತು ದೇವರಿಗೆ ಸೇರಿದ್ದು ನಾವೇನು ಮಾಡಲು ಸಾಧ್ಯವಿಲ್ಲ ಎಂದ ದೇವಸ್ಥಾನದ ಸಿಬ್ಬಂದಿ

0
image_editor_output_image445097961-1734767267083.jpg

ಚೆನ್ನೈ: ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡುವಾಗ ಹುಂಡಿಯಲ್ಲಿ ದುಬಾರಿ ಬೆಳೆಯ ಐಫೋನ್ ಪತ್ತೆಯಾಗಿದೆ. ಆದರೆ ಇದು ಭಕ್ತರು ಹರಕೆ ರೂಪದಲ್ಲಿ ಹಾಕಿದ್ದಲ್ಲ ಬದಲಾಗಿ ಹುಂಡಿಗೆ ಹಣ ಹಾಕುವ ವೇಳೆ ಆಯತಪ್ಪಿ ಹುಂಡಿಗೆ ಬಿದ್ದಿರುವುದು ಎಂದು ಬಳಿಕ ಗೊತ್ತಾಗಿದೆ.

ಅಂದಹಾಗೆ ಈ ಘಟನೆ ನಡೆದಿರುವುದು ಚೆನ್ನೈ ಸಮೀಪದ ತಿರುಪೋರೂರಿನ ಅರುಲ್ಮಿಗು ಕಂದಸ್ವಾಮಿ ದೇವಸ್ಥಾನದಲ್ಲಿ. ವಿನಯಗಾಪುರದ ದಿನೇಶ್ ಎಂಬ ವ್ಯಕ್ತಿ ತಿಂಗಳ ಹಿಂದೆ ಈ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದರು ಈ ವೇಳೆ ದೇವಸ್ಥಾನದ ಒಳಗೆ ಕಾಣಿಕೆ ಹುಂಡಿಗೆ ಹಣ ಹಾಕಲು ಶರ್ಟ್ ಕಿಸೆಯಿಂದ ಹಣ ತೆಗೆಯುವ ವೇಳೆ ಶರ್ಟ್ ಕಿಸೆಯಲ್ಲಿದ್ದ ದುಬಾರಿ ಬೆಲೆಯ ಐಫೋನ್ ಜಾರಿ ಕಾಣಿಕೆ ಡಬ್ಬದ ಒಳಗೆ ಬಿದ್ದಿದೆ ಕಾಣಿಕೆ ಹುಂಡಿ ದೊಡ್ಡದಾಗಿದ್ದರಿಂದ ಮೊಬೈಲ್ ಸುಲಭವಾಗಿ ಹುಂಡಿಯ ಒಳಗೆ ಬಿದ್ದಿದೆ,

ಇದರಿಂದ ಗಾಬರಿಗೊಂಡ ದಿನೇಶ್ ದೇವಳದ ಸಿಬಂದಿಯನ್ನು ಸಂಪರ್ಕಿಸಿ ಹೀಗೀಗೆ ಕಾಣಿಕೆ ಹಾಕುವ ವೇಳೆ ನನ್ನ ಮೊಬೈಲ್ ಕೈತಪ್ಪಿ ಹುಂಡಿಯ ಒಳಗೆ ಬಿದ್ದಿದೆ ಎಂದು ಹೇಳಿಕೊಂಡಿದ್ದಾನೆ ಆದರೆ ಇದಕ್ಕೆ ಉತ್ತರಿಸಿದ ಸಿಬಂದಿ ಹುಂಡಿಗೆ ಬಿದ್ದ ವಸ್ತುಗಳು ದೇವರಿಗೆ ಸೇರಿದ್ದು ಹಾಗಾಗಿ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!