ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಶ್ರೀ ಭಾರತೀ ಕ್ರಿಕೆಟ್ ಅಕಾಡೆಮಿ ಉದ್ಘಾಟನೆ
ನಂತೂರು: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಮಂಗಳೂರು ಕರಾವಳಿ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಶ್ರೀ ಭಾರತೀ ಕ್ರಿಕೆಟ್ ಅಕಾಡೆಮಿಯನ್ನು ಗುರುವಾರ ಉದ್ಘಾಟಿಸಲಾಯಿತು.
ಜಿಲ್ಲಾ ನಿವೃತ್ತ ನ್ಯಾಯಾಧೀಶ ಡಿ.ವಿಶ್ವೇಶ್ವರ ಭಟ್ ಉದ್ಘಾಟಿಸಿ, ಮಾತನಾಡಿ, ವಿದ್ಯಾರ್ಥಿಗಳಿಗೆ ಕ್ರಿಕೆಟ್ ಆಸಕ್ತಿಯ ಕ್ರೀಡೆ. ಉತ್ತಮ ತರಬೇತಿ ಪಡೆದು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವಂತಾಗಲಿ ಎಂದು ಹೇಳಿದರು.
ಮಂಗಳೂರು ಮಹಾನಗರಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶಕೀಲಾ ಕಾವ, ಶಿವಭಾಗ್ ಸದಸ್ಯೆ ಮತ್ತು ಮಂಗಳೂರು ಕರಾವಳಿ ಕ್ರಿಕೆಟ್ ಅಕಾಡೆಮಿ ಜತೆಕಾರ್ಯದರ್ಶಿ ಶಬಿತಾ, ಜನರಲ್ ಸೆಕ್ರೆಟರಿ ಸಂತೋಷ್, ತರಬೇತುದಾರರಾದ ಸಂಜೀತ್, ಲಕ್ಷ್ಮೀಕಾಂತ್ ದಾಸ್, ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಸೇವಾ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಮೋಹನ್ ಕಾಶಿಮಠ, ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಮಂಗಳೂರು ಹವ್ಯಕ ಮಂಡಲ ಸಹಾಯ ವಿಭಾಗ ಪ್ರಧಾನ ಭಾಸ್ಕರ ಹೊಸಮನೆ, ಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ ಮತ್ತು ದುರ್ಗಾವತಿ, ಬೋಧಕ, ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಸೇವಾ ಸಮಿತಿ ನಿರ್ದೇಶಕ ಗಿರೀಶ್ ಎಂ. ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ವಂದಿಸಿದರು. ದೈಹಿಕ ಶಿಕ್ಷಕ ನಿತಿನ್ ನಿರೂಪಿಸಿದರು.