ವಿಟ್ಲ: ಸರಣಿ ಅಪಘಾತ: ಮೂರು ವಾಹನಗಳು ಜಖಂ: ಬೈಕ್ ಸವಾರ ಗಂಭೀರ
ವಿಟ್ಲ: ವಿಟ್ಲ ಪೇಟೆ ಮೊದಲಿನಿಂದಲೇ ವಾಹನ ಸಂಚಾರಕ್ಕೆ ಅಡ್ಡಿ ಆಗುವುದರಲ್ಲಿ ಮೊದಲೇ ಪ್ರಸಿದ್ಧಿ ಪಡೆದಿದೆ. ಯಾಕೆಂದರೆ ನಾಲ್ಕು ಮಾರ್ಗಗಳಲ್ಲಿ ಇಕ್ಕಟ್ಟಾಗಿರುವ ಕಾರಣ ವಿಟ್ಲದ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ.
ವಿಟ್ಲ- ಮಂಗಳೂರು ರಸ್ತೆಯಲ್ಲಿ ಬೈಕ್, ಓಮ್ನಿ, ಕಾರು ನಡುವೆ ಸರಣಿ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ.
ವಿಟ್ಲ ಪೇಟೆಯ ಮಂಗಳೂರು ರಸ್ತೆಯ ಅಮಿತ್ ಹೋಟೆಲ್ ಬಳಿ ಆಕ್ವಿವಾ ಸವಾರೊಬ್ಬರು ದ್ವಿಚಕ್ರ ವಾಹನ ಸಹಿತ ಹೊರಟ್ಟಿದ್ದು, ಈ ಸಂದರ್ಭ ಹಿಂದಿನಿಂದ ಬಂದ ಕಾರು ನಿಯಂತ್ರಣ ತಪ್ಪಿ ಬಲ ಬದಿಗೆ ನುಗ್ಗಿದೆ. ಈ ಸಂದರ್ಭ ಮಂಗಳೂರು ಕಡೆಯಿಂದ ಬೈಕ್ ಸವಾರನೊಬ್ಬ ಬಂದು ನಿಂತಿದ್ದ ಓಮ್ನಿ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ನಲ್ಲಿದ್ದ ಇಬ್ಬರು ರಸ್ತೆಗೆ ಉರುಳಿ ಈ ಘಟನೆ ನಡೆದಿದೆ.
ಈ ಘಟನೆಯಲ್ಲಿ ಒಟ್ಟು ಮೂರು ವಾಹನಗಳು ಜಖಂ ಆಗಿರುತ್ತದೆ. ಬೈಕ್ ನಲ್ಲಿದ್ದ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.




