ಪುಂಜಾಲಕಟ್ಟೆ: ಫ್ಯಾಕ್ಟರಿಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಪಿಕಪ್ ವಾಹನ ಕಳವು: ಆರೋಪಿಯ ಬಂಧನ
ಪುಂಜಾಲಕಟ್ಟೆ ಇಂಟರ್ ಲಾಕ್ ಪ್ಯಾಕ್ಟರಿಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಬೊಲೆರೋ ಪಿಕಪ್ ಗೂಡ್ಸ್ ವಾಹನ ಕಳವು ಪ್ರಕರಣದ ಆರೋಪಿಗಳನ್ನು ಪುಂಜಾಲಕಟ್ಟೆ ಎಸ್.ಐ.ನಂದಕುಮಾರ್ ನೇತ್ರತ್ವದ ತಂಡ ವಶಪಡಿಸಿಕೊಂಡ ಘಟನೆ ನಡೆದಿದೆ.
ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲಾಡಿ ಗ್ರಾಮದ ಅರ್ತಿಲ ಎಂಬಲ್ಲಿರುವ TIYARA ಇಂಟರ್‌ಲಾಕ್ ಫ್ಯಾಕ್ಟರಿಯ ಮಾಲಿಕರಾದ ಟೆರೆನ್ಸ್ ಜೋಶೆಲ್ ವೇಗಸ್ ರವರ KA19D5858 ನೇ ಬೊಲೆರೋ ಪಿಕಪ್ ಗೂಡ್ಸ್ ವಾಹನವನ್ನು ಡಿ. 2 ರಂದು ಫ್ಯಾಕ್ಟರಿಯ ಆವರಣದಲ್ಲಿ ನಿಲ್ಲಿಸಿದ್ದ ಸಮಯ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, , ಈ ಬಗ್ಗೆ ಡಿ.3ರಂದು ಪುಂಜಾಲಕಟ್ಟೆ ಪೊಲೀಸ್ ., 76/2024 : 303(2) BNS 2023 ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಗಲಕೋಟೆಯ ಕನಕಪ್ಪ ಯಮನಪ್ಪ ಕ್ಯಾದಿಗೇರಿ (24), ರಮೇಶ್ ಚೌಹಾಣ್ (26) ಬಾಗಲಕೋಟೆಯಿಂದ ವಶಕ್ಕೆ ಪಡೆದು ದಸ್ತಗಿರಿ ಮಾಡಲಾಗಿದ್ದು ಆರೋಪಿಗಳು ಕಳವು ಮಾಡಿದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ KA19D5858 ನೇ ನಂಬ್ರದ ಬೊಲೆರೋ ಪಿಕಪ್ ಗೂಡ್ಸ್ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.